ಪೊಲೀಸ್ ಕೈಯಿಂದ ತಪ್ಪಿಸಲು ಹೋಗಿ ಆಸ್ಪತ್ರೆಯ 3ನೇ ಮಹಡಿಯಿಂದ ಬಿದ್ದು ದರೋಡೆ ಆರೋಪಿ ಮೃತ್ಯು
Saturday, August 27, 2022
ಕಲಬುರಗಿ: ಪೊಲೀಸ್ ಕೈಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ 3ನೇ ಮಹಡಿಯಿಂದ ಬಿದ್ದು ಆರೋಪಿ ಮೃತಪಟ್ಟಿರುವ ಘಟನೆ ನಡೆದಿದೆ.
ಕಲಬುರಗಿಯ ಹಮಾಲವಾಡಿ ಬಡಾವಣೆಯ ನಿವಾಸಿ ಮುನ್ನಾ ಅಲಿಯಾಸ್ ಶೇಖ್ ಸೋಹಲ್ ಮೃತಪಟ್ಟ ಆರೋಪಿ.
ಶೇಖ್ ಸೋಹಲ್ ನನ್ನು ಪೊಲೀಸರು ದರೋಡೆ ಪ್ರಕರಣದಲ್ಲಿ ಬ್ರಹ್ಮಪೂರ ಪೊಲೀಸರ ಬಂಧಿಸಿದ್ದರು. ಈತನನ್ನು ನ್ಯಾಯಾಲಯದ ಮುಂದೆ ಹಾಜರಿಪಡಿಸುವ ಪೂರ್ವದಲ್ಲಿ ಕೋವಿಡ್ ತಪಾಸಣೆಗೆಂದು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಕೋವಿಡ್ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಈತ, ಆಸ್ಪತ್ರೆಯ ಮೂರನೇ ಮಹಡಿ ಹತ್ತಿ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ