ತುಲಾ ರಾಶಿಯಲ್ಲಿ ಚತುರ್ಗ್ರಾಹಿ ಯೋಗ: ಇದರಿಂದ ಈ 3 ರಾಶಿಗೆ ಲಾಭ!!
Friday, August 19, 2022
ಮಕರ ರಾಶಿ : ಈ ಯೋಗದ ಪ್ರಭಾವದಿಂದ ಮಕರ ರಾಶಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ವಾಸ್ತವವಾಗಿ ಈ ಯೋಗವು ಮಕರ ರಾಶಿಯವರ ಜಾತಕದ 10 ನೇ ಮನೆಯಲ್ಲಿ ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ಮಕರ ರಾಶಿಯವರಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆಯಿದೆ. ತುಲಾ ರಾಶಿಯಲ್ಲಾಗುವ ಬದಲಾವಣೆ ಮಕರ ರಾಶಿಯವರಿಗೆ ದೊಡ್ಡ ಮಟ್ಟದಲ್ಲಿ ಶುಭ ಫಲ ನೀಡಲಿದೆ.
ಕುಂಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚತುರ್ಗ್ರಾಹಿ ಯೋಗದ ಪ್ರಭಾವದಿಂದ ಕುಂಭ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಚತುರ್ಗ್ರಾಹಿ ಯೋಗದ ಪ್ರಭಾವದಿಂದ ಕುಂಭ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಎಂದ್ರೆ ತಪ್ಪಾಗುವುದಿಲ್ಲ. ಈ ಸಮಯದಲ್ಲಿ ಪ್ರತಿಯೊಂದು ಕೆಲಸದಲ್ಲಿ ಅದೃಷ್ಟ ಒಲಿದು ಬರಲಿದೆ. ಅಲ್ಲದೆ, ದೀರ್ಘಕಾಲ ಬಾಕಿ ಇರುವ ಕೆಲಸಗಳು ಸರಾಗವಾಗಿ ಮುಗಿಯಲಿವೆ. ಕುಂಭ ರಾಶಿಯವರು ಈ ಸಮಯದಲ್ಲಿ ವ್ಯಾಪಾರಕ್ಕಾಗಿ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.
ಕನ್ಯಾ ರಾಶಿ : ಜ್ಯೋತಿಷ್ಯದ ಪ್ರಕಾರ, ಚತುರ್ಗ್ರಾಹಿ ಯೋಗವು ಕನ್ಯಾ ರಾಶಿಯವರಿಗೆ ಪ್ರಯೋಜನಕಾರಿ ಎಂದು ಹೇಳಬಹುದು. ಕನ್ಯಾ ರಾಶಿ ಜಾತಕದ ಎರಡನೇ ಮನೆಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ. ಜ್ಯೋತಿಷಿಗಳು ಜಾತಕದ ಎರಡನೇ ಮನೆಯನ್ನು ಮಾತು ಮತ್ತು ಹಣ ಎಂದು ಪರಿಗಣಿಸುತ್ತಾರೆ. ಕನ್ಯಾ ರಾಶಿಯವರಿಗೆ ಚತುರ್ಗ್ರಾಹಿ ಯೋಗದ ಪ್ರಭಾವದಿಂದ ಹಠಾತ್ ಧನಲಾಭ ಉಂಟಾಗುವ ಸಾಧ್ಯತೆಯಿದೆ.