![ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ! ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ!](https://blogger.googleusercontent.com/img/b/R29vZ2xl/AVvXsEjQZ5zgJucH0bD2_FG01AU1n-ixMvzvPPMtU4sD3pn5hvQxpByQcFI59Baf25dW1mqiJs3Ri81pFpJuMNyBFPp19WYMAkXdKBu0mWEXWWr9U_8k5n7_dXqj-IpZ8SfzfLhFQz1O7yYNTl2h/s1600/1659621868458621-0.png)
ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ!
Thursday, August 4, 2022
ಕೇರಳ: ಐವರು ಶಾಲಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕನೋರ್ವನಿಗೆ 79 ವರ್ಷಗಳ ಕಠಿಣ ಶಿಕ್ಷೆ ಹಾಗೂ 2.70ಲಕ್ಷ ರೂ. ದಂಡ ವಿಧಿಸಿ ಕೇರಳದ ಪೊಕ್ಸೊ ನ್ಯಾಯಾಲಯ ಆದೇಶಿಸಿದೆ.
ಕಣ್ಣೂರು ಜಿಲ್ಲೆಯ ಪಯ್ಯನ್ನೂರು ಆಲಪಡಂಬು ನಿವಾಸಿ ಪಿ.ಇ.ಗೋವಿಂದ ನಂಬೂದಿರಿ ಶಿಕ್ಷೆಗೊಳಗಾದ ಅಪರಾಧಿ.
2013-14ರಲ್ಲಿ ಪಿ.ಇ.ಗೋವಿಂದ ನಂಬೂದಿರಿ ತರಗತಿಯೊಳಗೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವೇಳೆ ವಿದ್ಯಾರ್ಥಿನಿಯೊಬ್ಬಳ ನಡವಳಿಕೆಯ ಬಗ್ಗೆ ಪಾಲಕರು ಅನುಮಾನಗೊಂಡು ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ ಪ್ರಕರಣ ಬಹಿರಂಗವಾಗಿದೆ. ತಕ್ಷಣ ಆಕೆಯ ಪೋಷಕರು ಈ ವಿಚಾರವನ್ನು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ಪರಿಣಾಮ ಆರೋಪಿ ಪಿ.ಇ.ಗೋವಿಂದ ನಂಬೂದಿರಿ, ಮುಖ್ಯೋಪಾಧ್ಯಾಯಿನಿ ಮತ್ತು ಹೆಲ್ಪ್ ಡೆಸ್ಕ್ ಪ್ರಭಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆರೋಪಿಯನ್ನು ಶಾಲೆಯಿಂದ ವಜಾಗೊಳಿಸಲಾಗಿತ್ತು. ಇದೀಗ ಪ್ರಕರಣವನ್ನು ಕೈಗೆತ್ತಿಕೊಂಡ ಕೋರ್ಟ್ ಆರೋಪಿ
ಪಿ.ಇ.ಗೋವಿಂದ ನಂಬೂದಿರಿಗೆ 79ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಮುಖ್ಯೋಪಾಧ್ಯಾಯಿನಿ ಮತ್ತು ಹೆಲ್ಪ್ ಡೆಸ್ಕ್ ಪ್ರಭಾರಿಯ ಮೇಲಿನ ಕೇಸ್ ಅನ್ನು ಖುಲಾಸೆಗೊಳಿಸಿದೆ.