![ಮಂಗಳೂರು: ಕೆಲವೇ ಗಂಟೆಗಳಲ್ಲಿ ದ್ವಿಚಕ್ರ ಸಹಸವಾರ ಸಂಚಾರ ನಿಷೇಧ ವಾಪಾಸ್; ನಾಳೆಯಿಂದ ರಾತ್ರಿ ನಿರ್ಬಂಧ 9ರವರೆಗೆ ಸಡಿಲಿಕೆ ಮಂಗಳೂರು: ಕೆಲವೇ ಗಂಟೆಗಳಲ್ಲಿ ದ್ವಿಚಕ್ರ ಸಹಸವಾರ ಸಂಚಾರ ನಿಷೇಧ ವಾಪಾಸ್; ನಾಳೆಯಿಂದ ರಾತ್ರಿ ನಿರ್ಬಂಧ 9ರವರೆಗೆ ಸಡಿಲಿಕೆ](https://blogger.googleusercontent.com/img/b/R29vZ2xl/AVvXsEi1FgOj6wS6-H6dTxt5g5ohS5ibTVdm48eEMrEQwDV_2JibEA7jizP8bNMKatX19iZ8vXeZ5JR_4U8zmZoWHwttozyQpibp09VSx3hQnIrp4woRzdOAkC19W_XqlXTUT4OGmBC4rDY6_B1I/s1600/1659615064315495-0.png)
ಮಂಗಳೂರು: ಕೆಲವೇ ಗಂಟೆಗಳಲ್ಲಿ ದ್ವಿಚಕ್ರ ಸಹಸವಾರ ಸಂಚಾರ ನಿಷೇಧ ವಾಪಾಸ್; ನಾಳೆಯಿಂದ ರಾತ್ರಿ ನಿರ್ಬಂಧ 9ರವರೆಗೆ ಸಡಿಲಿಕೆ
Thursday, August 4, 2022
ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಡೆಯುತ್ತಿದ್ದ ಸರಣಿ ಹತ್ಯೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ದೃಷ್ಟಿಯಿಂದ ರಾತ್ರಿ ನಿರ್ಬಂಧದ ವೇಳೆ ದ್ವಿಚಕ್ರ ವಾಹನಗಳಲ್ಲಿ ಪುರುಷ ಹಿಂಬದಿ ಸವಾರ ಸಂಚಾರವನ್ನು ನಿರ್ಬಂಧಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದರು. ಆದರೆ ಈ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ವಾಪಸ್ ಪಡೆದಿದ್ದಾರೆ.
ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ರಾತ್ರಿ ನಿರ್ಬಂಧವನ್ನು ಹಂತಹಂತವಾಗಿ ಸಡಿಲಿಕೆ ಮಾಡಲಾಗುತ್ತದೆ. ಅಲ್ಲದೆ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ದ್ವಿಚಕ್ರ ವಾಹನಗಳಲ್ಲಿ ಪುರುಷರ ಡಬ್ಬಲ್ ರೈಡಿಂಗ್ ಗೆ ವಾರದವರೆಗೆ ನಿರ್ಬಂಧ ವಿಧಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದರು. ಆದರೆ ಆದೇಶ ಜಾರಿಯಾಗಿ ಕೆಲವೇ ಗಂಟೆಗಳಲ್ಲಿ ಈ ಆದೇಶವನ್ನು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹಿಂಪಡೆದಿದ್ದಾರೆ.
ಅದೇ ರೀತಿ ಸಂಜೆ 6ರಿಂದ ಬೆಳಗ್ಗೆ 6ಗಂಟೆಯವರೆಗೆ ಇದ್ದ ರಾತ್ರಿ ನಿರ್ಬಂಧವನ್ನು ಆಗಸ್ಟ್ 5ರಿಂದ ಮುಂದಿನ ಮೂರು ದಿನಗಳ ಕಾಲ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ನಿರ್ಬಂಧ ವಿಧಿಸಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹೊಸ ಕಾನೂನಿನ್ವಯ ತುರ್ತುಸೇವೆಗಳನ್ನು ಹೊರತುಪಡಿಸಿ ಈ ದಿನಗಳಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಅಂಗಡಿ ಮುಂಗಟ್ಟುಗಳು ಮುಚ್ಚಲಿವೆ. ನಾಳೆಯಿಂದ ಮದ್ಯದಂಗಡಿಗಳನ್ನು ಸಂಜೆ 6ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಉಳಿದಂತೆ 144ಸೆಕ್ಷನ್ ಜಾರಿಯಲ್ಲಿ ಇರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.