-->

ಉಪ್ಪಿನಂಗಡಿ: ಅಪಘಾತದಲ್ಲಿ ಮೃತಪಟ್ಟ ಸಂಬಂಧಿಯನ್ನು ನೋಡಲು ಹೋಗುತ್ತಿದ್ದ ಯುವಕ ಟಿಪ್ಪರ್ ಅಪಘಾತದಿಂದ ಮೃತ್ಯು

ಉಪ್ಪಿನಂಗಡಿ: ಅಪಘಾತದಲ್ಲಿ ಮೃತಪಟ್ಟ ಸಂಬಂಧಿಯನ್ನು ನೋಡಲು ಹೋಗುತ್ತಿದ್ದ ಯುವಕ ಟಿಪ್ಪರ್ ಅಪಘಾತದಿಂದ ಮೃತ್ಯು

ಮಂಗಳೂರು: ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಐಟಿಐ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ದುರಾದೃಷ್ಟಕರ ಘಟನೆಯೊಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿಯ ಹುಣ್ಣೆಕಟ್ಟೆ ಪಿಲಿಗೂಡು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಕಕ್ಕೆಪದವು ನಿವಾಸಿ ಮುಹಮ್ಮದ್ ಸಫ್ಘಾನ್ (20) ಮೃತಪಟ್ಟ ದುರ್ದೈವಿಗ. ಮೃತಪಟ್ಟ ಯುವಕ ತುಂಬೆ ಐಟಿಐ ವಿದ್ಯಾರ್ಥಿಯಾಗಿದ್ದರು. ಇಂದು ಬೆಳಗ್ಗೆ ಪುಂಜಾಲಕಟ್ಟೆ ಮೇಲಿನಪೇಟೆಯ ಶಾರದಾ ಮಂಟಪದ ಬಳಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿತ್ತು. ಇದರಯ ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ, ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಶಫೀಕ್ (20) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇವರು ಮುಹಮ್ಮದ್ ಸಫ್ಘಾನ್ ಅವರ ಸಂಬಂಧಿಕರೆನ್ನಲಾಗಿದೆ.

ಇವರ ಅಪಘಾತದ ವಿಚಾರ ತಿಳಿದು ಮುಹಮ್ಮದ್ ಸಫ್ಘಾನ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆಂದು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕುಪ್ಪೆಟ್ಟಿಯ ಹುಣ್ಣೆಕಟ್ಟೆ ಪಿಲಿಗೂಡು ಎಂಬಲ್ಲಿ ಟಿಪ್ಪರ್ ವಾಹನವೊಂದು ಬೈಕ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಸಫ್ಘಾನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ವಾಹನ ಚಾಲಕ ಟಿಪ್ಪರ್ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು , ಟಿಪ್ಪರ್ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article