ಅಪರಾಧಿ ಪ್ರವೀಣನಿಗೆ ಬಿಡುಗಡೆ ಭಾಗ್ಯ ಬೇಡ: ಪತ್ನಿ ಕುಟುಂಬಸ್ಥರ ಮನವಿ
ಅಪರಾಧಿ ಪ್ರವೀಣನಿಗೆ ಬಿಡುಗಡೆ ಭಾಗ್ಯ ಬೇಡ: ಪತ್ನಿ ಕುಟುಂಬಸ್ಥರ ಮನವಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ವಾಮಂಜೂರು ಕೊಲೆ ಪ್ರಕರಣ ಅಪರಾಧಿ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಪ್ರವೀಣ್ ಕುಮಾರ್‌ನನ್ನು ಯಾವ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಸ್ವತಃ ಪತ್ನಿ ಸೇರಿದಂತೆ ಕುಟುಂಬಸ್ಥರು ಮಂಗಳೂರು ನಗರದ ಪೊಲೀಸ್ ಕಮಿಷನರ್ ಶಶಿಕುಮಾರ್ ಮನವಿ ಮಾಡಿದ್ದಾರೆ.
ಆತನ ತಾನು ಬಿಡುಗಡೆಯಾದರೆ ಇನ್ನೂ ನಾಲ್ಕು ಜನರನ್ನು ಕೊಲ್ಲುತ್ತೇನೆ ಎಂದು ಈಗಾಗಲೇ ಹೇಳಿದ್ದಾನೆ. ಹಾಗಾಗಿ ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬೇಡಿ ಎಂದು ಅಪರಾಧಿ ಪ್ರವೀಣ್ ಕುಮಾರ್ ಪತ್ನಿ, ಸಹೋದರ ಮತ್ತು ಕೊಲೆಯಾದ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ ಸಹಿತ 30 ಮಂದಿಯ ತಂಡ ಮಂಗಳೂರು ನಗರ ಪೊಲೀಸ್ ಕಮಿಷನರ್ ಗೆ ಮನವಿ ಮಾಡಿ ಒತ್ತಾಯಿಸಿದರು.
ವಿಚಾರಣಾ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಪ್ರವೀಣ್ ಕುಮಾರ್ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಗಲ್ಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಪರಿವರ್ತನೆಯಾಗಿತ್ತು.
ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಪ್ರವೀಣ್ ಕುಮಾರ್ ಇದ್ದಾನೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಸನ್ನಡತೆ ಆಧಾರದಲ್ಲಿ ಈತನನ್ನು ಜೈಲಿನಿಂದ ಬಿಡುಗಡೆಗೆ ಸರಕಾರ ಮುಂದಾಗಿದೆ. ಅಲ್ಲದೇ ಸಂತ್ರಸ್ತರ ಹಾಗೂ ಪ್ರವೀಣನ ಮನೆಯವರ ಹೇಳಿಕೆ ದಾಖಲಿಸುವಂತೆ ಸರಕಾರ ಪೊಲೀಸ್ ಇಲಾಖೆಗೆ ಸೂಚಿಸಿತ್ತು.
ಈ ಕಾರಣ, ಈ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರವೀಣ್ ಕುಮಾರ್ ನ ಸಂಬಂಧಿ ಹಾಗೂ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ್, ಪ್ರವೀಣ್ ನ ಪತ್ನಿ ಅನಸೂಯ ಪ್ರವೀಣ್ ಸಹೋದರ ಪ್ರದೀಪ್ ಹೇಳಿಕೆ ನೀಡಿದ್ದಾರೆ.
ಪ್ರವೀಣ ಕುಮಾರ್ ಬಿಡುಗಡೆಯಾಗಿ ಬಂದರೆ ಮುಂದಿನ ದಿನಗಳಲ್ಲಿ ಮತ್ತೆ ಆತ ಕೊಲೆ ಮಾಡುವ ಸಾಧ್ಯತೆ ಇದ್ದು, ಆತನನ್ನು ಬಿಡುಗಡೆ ಮಾಡಬಾರದು ಎಂದು ಪತ್ನಿ ಕಮಿಷನರ್ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮಂಗಳೂರು ನಗರದ ಪೊಲೀಸ್ ಕಮಿನಷರ್ ಶಶಿಕುಮಾರ್, ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದು ಕುಟುಂಬಿಕರು ಇಲ್ಲಿ ಬಂದು ಬಿಡುಗಡೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.