-->
ಮಂಗಳೂರು: ಕೊಟ್ಟಿಗೆಗೆ ನುಗ್ಗಿ ದನ ಕದ್ದು ಪರಾರಿಯಾಗಿದ್ದ ದನಗಳ್ಳರು ಅರೆಸ್ಟ್

ಮಂಗಳೂರು: ಕೊಟ್ಟಿಗೆಗೆ ನುಗ್ಗಿ ದನ ಕದ್ದು ಪರಾರಿಯಾಗಿದ್ದ ದನಗಳ್ಳರು ಅರೆಸ್ಟ್

ಮಂಗಳೂರು: ನಗರದ ಬಜಾಲ್ ಗ್ರಾಮದ ಮನೆಯೊಂದರ ಕೊಟ್ಟಿಗೆಗೆ ನುಗ್ಗಿ ದನಗಳವುಗೈದು ಪರಾರಿಯಾಗಿರುವ ಐವರು ದನಗಳ್ಳರನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.


ಗುರುನಗರ, ಬಂಗ್ಲಗುಡ್ಡೆ, ಕೊಟ್ಟಾರಿ ಗುಡ್ಡೆ ನಿವಾಸಿ ಮಹಮ್ಮದ್ ಅಶ್ಫಕ್ (22), ಗುರುಪುರ, ಅಡ್ಡೂರು ನಿವಾಸಿ ಅಝರುದ್ದೀನ್(31), ಜಲ್ಲಿಗುಡ್ಡೆ , ಬಜಾಲ್ ಪಡ್ಪು ನಿವಾಸಿ ಸುಹೈಲ್(19), ಬಜಾಲ್ ಪಕ್ಕಲಡ್ಕ ನಿವಾಸಿ ಮೊಹಮ್ಮದ್ ಅಫ್ರೀನ್(25), ಬಜಾಲ್, ಕಟ್ಟಪುಣಿ ನಿವಾಸಿ ಶಾಹೀದ್(19) ಬಂಧಿತ ದನಗಳ್ಳರು.


ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಬಜಾಲ್ ಗ್ರಾಮದ ನಿವಾಸಿಯಾದ ಅಶ್ವಿನ್ ಎಂಬವರ ಕೊಟ್ಟಿಗೆಗೆ ಜು. 21ರ ನಸುಕಿನ ವೇಳೆ 3.30ರ ವೇಳೆಗೆ ಆರೋಪಿಗಳು ದನವನ್ನು ಕದ್ದೊಯ್ದಿದ್ದಾರೆ‌. ಹಟ್ಟಿಯಲ್ಲಿ ದನಗಳು ಕೂಗುವುದನ್ನು ಕೇಳಿ ಅಶ್ವಿನ್ ಅವರು ತಕ್ಷಣ ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಕೊಟ್ಟಿಗೆಯಲ್ಲಿದ್ದ ದನವೊಂದು ಹೊರಗೆ ನಿಂತಿತ್ತು. ಮತ್ತೊಂದು ಹಸು ಕಳುವಾಗಿತ್ತು. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ದನದ ಪತ್ತೆಯಿರಲಿಲ್ಲ. ಈ ಬಗ್ಗೆ ಕಂಕನಾಡಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಐವರು ದನಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿರುವ ಮಾರುತಿ ಕಾರು, ಕತ್ತಿ, ಹಗ್ಗಗಳನ್ನು ಸ್ವಾಧೀನ ಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article