-->
ರಹಸ್ಯ ಕ್ಯಾಮರಾ ಬಳಸಿ ಮಹಿಳೆಯರ ಬೆತ್ತಲೆ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್: ಇದರ ಹಿಂದಿದ್ದ ದುಷ್ಕೃತ್ಯವೇನು ಗೊತ್ತೇ?

ರಹಸ್ಯ ಕ್ಯಾಮರಾ ಬಳಸಿ ಮಹಿಳೆಯರ ಬೆತ್ತಲೆ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್: ಇದರ ಹಿಂದಿದ್ದ ದುಷ್ಕೃತ್ಯವೇನು ಗೊತ್ತೇ?

ಬೆಂಗಳೂರು: ರಹಸ್ಯ ಕ್ಯಾಮೆರಾಗಳನ್ನು ಇರಿಸಿ ಮಹಿಳೆಯರ ಬೆತ್ತಲೆ ವೀಡಿಯೋಗಳನ್ನು ಚಿತ್ರೀಕರಿಸಿ ಬಳಿಕ ಅದನ್ನು ವೈರಲ್ ಮಾಡಿ ಮಾನ ಹರಾಜು ಮಾಡುವುದಾಗಿ ಬೆದರಿಸಿ ಮಹಿಳೆಯರಿಂದ ಲೈಂಗಿಕ ಸುಖ ಪಡೆಯಲು ಪ್ರಯತ್ನಿಸುತ್ತಿದ್ದ ಕಾಮುಕನನ್ನು ಬಂಧಿಸುವಲ್ಲಿ ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ . ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹೇಶ್ (30) ಬಂಧಿತ ಕಾಮುಕ. ಈತ ಪರಿಚಯಸ್ಥ ಮಹಿಳೆಯರು ಮನೆಗೆ ಬಂದಿರುವ ವೇಳೆ ಅಥವಾ ಪರಿಚಯಸ್ಥರ ಮನೆಗೆ ಹೋಗಿರುವ ಸಂದರ್ಭ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ಅವರ ಬೆತ್ತಲೆ ವೀಡಿಯೋಗಳನ್ನು ಮಾಡಿಕೊಳ್ಳುತ್ತಿದ್ದ. ಬಳಿಕ ಆ ಮಹಿಳೆಯರ ಇನ್ ಸ್ಟಾಗ್ರಾಂಗೆ ನಕಲಿ ಖಾತೆಯಿಂದ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಅಲ್ಲದೆ, ತನ್ನೊಂದಿಗೂ ಅಶ್ಲೀಲವಾಗಿ ಮಾತಾಡುವಂತೆ ಒತ್ತಾಯಿಸುತ್ತಿದ್ದ. ಇಲ್ಲವಾದರೆ ತನ್ನ ಬಳಿ ಇರುವ ವೀಡಿಯೋ ಪೋಸ್ಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ . ಕೆಲ ವೀಡಿಯೋ ತುಣುಕುಗಳನ್ನು ಕಳಿಸಿ, ತನ್ನ ಲೈಂಗಿಕ ಬಯಕೆಯನ್ನು ಈಡೇರಿಸುವಂತೆ ಆರೋಪಿ ಬೆದರಿಕೆ ಹಾಕುತ್ತಿದ್ದ. 

ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆತನಿಂದ ಎರಡು ರಹಸ್ಯ ಕಾಮೆರಾ , ಲ್ಯಾಪ್‌ಟಾಪ್ , ಎರಡು ಪೆನ್‌ಡ್ರೈವ್, ಎರಡು ಮೊಬೈಲ್, ಎರಡು ಮೆಮರಿ ಕಾರ್ಡ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article