ಮಂಗಳೂರು ಸಿವಿಕ್ ಗ್ರೂಪ್‌ನಿಂದ ನಾಗರಿಕ ಸಮಸ್ಯೆಗಳ ಬಗ್ಗೆ ಸಮಾಲೋಚನಾ ಸಭೆ
ನಾಗರಿಕ ಸಮಸ್ಯೆಗಳ ಬಗ್ಗೆ ಪ್ರಜೆಗಳ ಸಮಾಲೋಚನೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಮಂಗಳೂರು ಸಿವಿಕ್ ಗ್ರೂಪ್‌ನಿಂದ ನಾಗರಿಕ ಸಮಸ್ಯೆಗಳ ಬಗ್ಗೆ ಸಮಾಲೋಚನಾ ಸಭೆ
ಮಂಗಳೂರನ್ನು ಉತ್ತಮ ನಾಗರಿಕ ಸ್ನೇಹಿ ನಗರವನ್ನಾಗಿಸುವ ನಿಟ್ಟಿನಲ್ಲಿ ನಾಗರಿಕ ಕುಂದುಕೊರತೆಗಳನ್ನು ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಲು ಸಮಾಲೋಚನಾ ಸಭೆಯನ್ನು ನಡೆಸಲು ನಿರ್ಧರಿಸಿದ್ದು, ಶನಿವಾರ ಸಂಜೆ 5 ಗಂಟೆಗೆ ಸೈಂಟ್ ಅಲೋಷಿಯಸ್ ಕಾಲೇಜ್ - ಗೆಲ್ಗೆ ಹಾಲ್ ನಲ್ಲಿ ಸಭೆಯನ್ನು ನಡೆಸಲು ನಿಗದಿಪಡಿಸಿದೆ.
ಮಂಗಳೂರು ನಗರದ ಮೇಲೆ ಕಾಳಜಿ ಇರುವ ಪ್ರಜ್ಞಾವಂತ ನಾಗರಿಕರಿಗೆ ಈ ಸಭೆಯಲ್ಲಿ ಭಾಗವಹಿಸುವಂತೆ ಮಂಗಳೂರು ಸಿವಿಕ್ ಗ್ರೂಪ್ ಆಮಂತ್ರಿಸುತ್ತಿದೆ.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ಭಾಗವಹಿಸಲು ಆಮಂತ್ರಣ ನೀಡಿದ್ದು ಅವರೂ ಈ ಸಮಸ್ಯೆಗಳಿಗೆ ತಮ್ಮ ದೃಷ್ಟಿಕೋನದ ಪರಿಹಾರವನ್ನು ಕೊಡುವ ಬಗ್ಗೆ ನಾಗರಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಂಗಳೂರು ನಗರದ ವಾರ್ಡ್ ಸಮಿತಿ ಮತ್ತು ಏರಿಯಾ ಸಭೆಗಳನ್ನು ಇನ್ನಷ್ಟು ಬಲಪಡಿಸುವ ಬಗ್ಗೆಯೂ ಚರ್ಚಿಸುವುದರ ಜೊತೆಗೆ, ಯಾವುದೋ ಕಾಣದ ಕೈಗಳು ವಾರ್ಡ್ ಸಮಿತಿ ಸಭೆಗಳು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡುವ ಪ್ರಯತ್ನ ಆಗುವುದರ, ಜನಪ್ರತಿನಿಧಿಗಳಿಗೆ ತಮ್ಮ ಕೆಲಸದಲ್ಲಿ ಪ್ರಜೆಗಳು ಹಸ್ತಕ್ಷೇಪ ಮಾಡದಂತೆ ತಡೆಯಲು ಪ್ರಯತ್ನಿಸುವುದರ ಮತ್ತು ನಮ್ಮ ತೆರಿಗೆ ಹಣ, ಪೋಲಾಗದಂತೆ, ಯಾರೂ ಮೋಸ ವಂಚನೆ ಮಾಡದಂತೆ ತಡೆಯುವುದರ ವಿಚಾರಗಳು.
ಸಮಾಲೋಚನಾ ಕಾರ್ಯಕ್ರಮ 27 ಆಗಸ್ಟ್ 2022 ಶನಿವಾರ ಸಾಯಂಕಾಲ 5 ಗಂಟೆಗೆ ಸೈಂಟ್ ಅಲೋಷಿಯಸ್ ಕಾಲೇಜ್ - ಗೆಲ್ಗೆ ಹಾಲ್ ನಲ್ಲಿ ನಡೆಯಲಿದ್ದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿಯಲ್ಲಿ ಜನಸಾಮಾನ್ಯನ ದನಿಯನ್ನು ಒಗ್ಗಟ್ಟಿನಿಂದ ಬಲಪಡಿಸೋಣ ಎಂದು ಮಂಗಳೂರು ಸಿವಿಕ್ ಗ್ರೂಪ್ ಕರೆ ನೀಡಿದೆ.
ಮಾಹಿತಿಗಾಗಿ ಸಂಪರ್ಕಿಸಿ 7666873534.