ಹಲ್ವಾ ತಂದ ಸಂಕಷ್ಟ: ಗಂಟಲಲ್ಲಿ ಸಿಲುಕಿ ವ್ಯಕ್ತಿ ಮೃತ್ಯು
Saturday, August 27, 2022
ಕೊಚ್ಚಿ: ಬೇಕರಿಯಿಂದ ತಂದಿದ್ದ ಹಲ್ವಾ ತಿನ್ನುತ್ತಿದ್ದಾಗ ಶ್ವಾಸನಾಳದಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದಲ್ಲಿ ಶುಕ್ರವಾರ ವರದಿಯಾಗಿದೆ.
ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿಪರಂಬುವಿನ ನಿವಾಸಿ ನಿಜಾರ್ (49) ಮೃತಪಟ್ಟವರು.
ನಿಜಾರ್ ಬುಧವಾರ ಬೆಳಗ್ಗೆ ಬೇಕರಿಯಿಂದ ಹಲ್ವಾ ಕೊಂಡು ತಂದು ಮನೆಯಲ್ಲಿ ಸೇವಿಸಿದ್ದರು. ಆದರೆ ಹಲ್ವಾ ಅವರ ಶ್ವಾಸನಾಳದಲ್ಲಿ ಸಿಲುಕಿ ಉಸಿರಾಟದ ತೊಂದರೆ ಉಂಟಾಗಿದೆ. ಪರಿಣಾಮ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಛಕಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ .