-->
ಕೊಟ್ಟಿಗೆ ಗೋಡೆ ಕುಸಿದು ಪುಟ್ಟ ಮಕ್ಕಳಿಬ್ಬರು ಮೃತ್ಯು

ಕೊಟ್ಟಿಗೆ ಗೋಡೆ ಕುಸಿದು ಪುಟ್ಟ ಮಕ್ಕಳಿಬ್ಬರು ಮೃತ್ಯು

ರಾಮನಗರ: ಭಾರೀ ಮಳೆಗೆ ಕೊಟ್ಟಿಗೆಯೊಂದು ಕುಸಿದು ಬಿದ್ದ ಪರಿಣಾಮ ಪುಟ್ಟ ಮಕ್ಕಳಿಬ್ಬರು ಮೃತಪಟ್ಟ ಘಟನೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದ ಕೂಡೂರು ಕ್ರಾಸ್ ಬಳಿ ರವಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಸಂಭವಿಸಿದೆ. 

ಶೆಡ್ ನಲ್ಲಿ ವಾಸ್ತವ್ಯವಿದ್ದ ನೇಪಾಳ ಮೂಲದ ಫರ್ಬಿನ್ (4) ಹಾಗೂ ಇಷಿಕಾ (3) ಮೃತಪಟ್ಟ ದುರ್ದೈವಿಗಳು. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ಸ್ಥಳೀಯ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿರುವ ನೇಪಾಳ ಮೂಲದ ಎರಡು ಕುಟುಂಬಗಳು ಕೂಡುರು ಕ್ರಾಸ್ ನ ಗಂಗರಂಗಮ್ಮ ಎಂಬವರಿಗೆ ಸೇರಿರುವ ಶೆಡ್ ವೊಂದರಲ್ಲಿ ವಾಸವಿತ್ತು. ರವಿವಾರ ನಸುಕಿನ ವೇಳೆ ಈ ಶೆಡ್ ಗೆ ತಾಗಿಕೊಂಡಿದ್ದ ಪಕ್ಕದ ಮನೆಯ ಕೊಟ್ಟಿಗೆ ಗೋಡೆ ಏಕಾಏಕಿ ಕುಸಿದು ಶೆಡ್ ಮೇಲೆಯೇ ಬಿದ್ದಿದೆ. ಪರಿಣಾಮ ಶೆಡ್ ನಲ್ಲಿ ಮಲಗಿದ್ದ ಎರಡು ಕಂದಮ್ಮಗಳು ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿವೆ. ಮೀನಾ ಮತ್ತು ಮೋನಿಷಾ ಎಂಬಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಈ ಬಗ್ಗೆ ಕುದೂರು ಪೋಲಿಸ್ ಠಾಣೆ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article