ಮುಂಬೈ: ಬಾಯ್ ಫ್ರೆಂಡ್ ಗಾಗಿ ಬಸ್ ನಿಲ್ದಾಣದಲ್ಲೇ ಅಪ್ರಾಪ್ತೆಯರ ಜಡೆ ಕಾಳಗ; ಪ್ರಿಯತಮ ಕಾಲ್ಕಿತ್ತು ಪರಾರಿ
Saturday, August 27, 2022
ಮುಂಬೈ: ಅಪ್ರಾಪ್ತ ಬಾಲಕಿಯರಿಬ್ಬರು ಓರ್ವ ಹುಡುಗನಿಗಾಗಿ ಬಸ್ ನಿಲ್ದಾಣದಲ್ಲೇ ಜಡೆ ಹಿಡಿದು ಕಿತ್ತಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪೈಠಾಣ್ ಜಿಲ್ಲೆಯಲ್ಲಿ ನಡೆದಿದೆ.
17 ವರ್ಷದ ಬಾಲಕಿಯರಿಬ್ಬರು ಓರ್ವ ಬಾಯ್‌ಫ್ರೆಂಡ್‌ಗಾಗಿ ಸಾರ್ವಜನಿಕರ ಎದುರೇ ಕಿತ್ತಾಡಿಕೊಂಡು ಕಿರಿಕಿರಿ ಉಂಟು ಮಾಡಿದ್ದಾರೆ. ಈ ಘಟನೆ ಕಳೆದ ಜನರಿಂದ ಕಿಕ್ಕಿರಿದು ತುಂಬಿರುವ ಪೈಥಾನ್ ಬಸ್ ನಿಲ್ದಾಣದಲ್ಲೇ ನಡೆದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹುಡುಗಿಯರಿಬ್ಬರಲ್ಲಿ ಓರ್ವಳು ಈ ಪ್ರಿಯತಮನೊಂದೊಗೆ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಅದು ಮತ್ತೋರ್ವಾಕೆಗೆ ತಿಳಿದು ಆಕೆಯೂ ಅಲ್ಲಿಗೆ ಆಗಮಿಸಿದ್ದಾಳೆ.
ಈ ವೇಳೆ ಇಬ್ಬರ ನಡುವೆ ಬಾಯ್‌ಫ್ರೆಂಡ್ ವಿಚಾರಕ್ಕಾಗಿ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ತಾಳ್ಮೆ ಕಳೆದುಕೊಂಡು ಹುಡುಗಿಯರಿಬ್ಬರು ಸಾರ್ವಜನಿಕರು ಇದ್ದಾರೆ ಎಂಬುದನ್ನು ಗಮನಿಸದೇ ಎಲ್ಲರ ಮುಂಭಾಗವೇ ಜಡೆ ಹಿಡಿದು ಕಿತ್ತಾಡಿಕೊಂಡಿದ್ದಾರೆ.
ಹುಡುಗಿಯರಿಬ್ಬರು ಜಗಳ ಕಾಯುವುದನ್ನು ನೋಡಿ ಬೆದರಿದ ಅವರ ಬಾಯ್ ಫ್ರೆಂಡ್ ಅಲ್ಲಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ. ಜಡೆ ಜಗಳ ನೋಡಿದ ಪೊಲೀಸರು ಇಬ್ಬರನ್ನು ಠಾಣೆಗೆ ಕರೆದೊಯ್ದು ಬುದ್ದಿ ಮಾತು ಹೇಳಿ ಬಿಟ್ಟು ಕಳುಹಿಸಿದ್ದಾರೆ.