-->
ಮಂಗಳೂರಿನಲ್ಲಿ ಮತ್ತೆ ಗುಂಡಿನ ದಾಳಿ: ಪೊಲೀಸ್ ಮೇಲೆ ದಾಳಿ ನಡೆಸಿದ ನಟೋರಿಯಸ್ ಕ್ರಿಮಿನಲ್ ಗೆ ಗುಂಡೇಟು

ಮಂಗಳೂರಿನಲ್ಲಿ ಮತ್ತೆ ಗುಂಡಿನ ದಾಳಿ: ಪೊಲೀಸ್ ಮೇಲೆ ದಾಳಿ ನಡೆಸಿದ ನಟೋರಿಯಸ್ ಕ್ರಿಮಿನಲ್ ಗೆ ಗುಂಡೇಟು

ಮಂಗಳೂರು: ವ್ಯಕ್ತಿಯೋರ್ವರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿರುವ ಪ್ರಕರಣವೊಂದರಲ್ಲಿ ಸ್ಥಳ ಮಹಜರು ಮಾಡುತ್ತಿದ್ದ ವೇಳೆ ಪೊಲೀಸ್ ಮೇಲೆಯೇ ದಾಳಿ ನಡೆಸಿರುವ ನಟೋರಿಯಸ್ ಕ್ರಿಮಿನಲ್ ನನ್ನು ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಇಂದು ಮಂಗಳೂರಿನ ಹೊರವಲಯದಲ್ಲಿರುವ ವಳಚ್ಚಿಲ್ ನಲ್ಲಿ ನಡೆದಿದೆ.

ಮಿಸ್ಟಾ ಅಲಿಯಾಸ್ ಮುಸ್ತಾಕ್(26) ಗುಂಡೇಟಿಗೆ ಒಳಗಾದ ಆರೋಪಿ.

ಮಿಸ್ಟಾ ಅಲಿಯಾಸ್ ಮುಸ್ತಾಕ್ ಹಾಗೂ ಆತನ ಗೆಳೆಯ ಆಶಿಕ್ ವಿದ್ಯಾರ್ಥಿ ಯೂಸೂಫ್ ಮಿರ್ಶಾದ್(19) ಮೊಬೈಲ್ ಕಸಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆತನ ಮಾವ ರಮ್ಲಾನ್ ಆಸೀಫ್ ಈ ಬಗ್ಗೆ ವಿಚಾರಿಸಿದ್ದ ವೇಳೆ ಮಿಸ್ಟಾ ಅಲಿಯಾಸ್ ಮುಸ್ತಾಕ್ ವಳಚ್ಚಿಲ್ ಬಳಿಯ ಬದ್ರಿಯಾ ಮದರಸಾ ಬಳಿ ಡ್ರ್ಯಾಗರ್ ನಿಂದ ಅವರಿಗೆ ಚುಚ್ಚಿ ಹಲ್ಲೆಗೈದಿದ್ದನು. 


ಈ ಹಿನ್ನೆಲೆಯಲ್ಲಿ ಮಿಸ್ಟಾನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಇಂದು ಸ್ಥಳ ಮಹಜರು ಮಾಡುತ್ತಿದ್ದರು. ಈ ವೇಳೆ ಆತ ಏಕಾಏಕಿ ಪೊಲೀಸ್ ಮೇಲೆ ದಾಳಿ ನಡೆಸಿದ್ದಾನೆ. ಆದ್ದರಿಂದ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಮತ್ತೊಂದು ಸುತ್ತು ಮಿಸ್ ಫೈರ್ ಆಗಿದ್ದು ಒಂದು ಗುಂಡು ಆತನ ಕಾಲಿಗೆ ಬಿದ್ದಿದೆ‌. 


ಆರೋಪಿ ನಡೆಸಿರುವ ದಾಳಿಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ವಿನಾಯಕ ಭಾವಿಕಟ್ಟೆಗೆ ತರಚಿದ ಗಾಯವಾಗಿದ್ದು, ಪೊಲೀಸ್ ಸಿಬ್ಬಂದಿ ಸದ್ದಾಂ ಹುಸೈನ್ ಗೆ ಕೈಗೆ ಗಾಯವಾಗಿದೆ‌. 


ಆರೋಪಿ‌ ಮಿಸ್ಟಾ ಹಾಗೂ ಪೊಲೀಸ್ ಸಿಬ್ಬಂದಿ ಸದ್ದಾಂ ಹುಸೈನ್ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article