
ಸೋಮವಾರಪೇಟೆ: ಬೇಟೆಗೆಂದು ತೆರಳಿದಾತ ಗುಂಡೇಟಿಗೆ ಬಲಿ!
Tuesday, August 30, 2022
ಕೊಡಗು: ಬೇಟೆಗೆಂದು ತೆರಳಿರುವ ವ್ಯಕ್ತಿ ಗುಂಡೇಟಿಗೆ ಬಲಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಯಡವಾರೆ ಗ್ರಾಮದಲ್ಲಿ ನಡೆದಿದೆ.
ಯಡವಾರೆ ಗ್ರಾಮದ ಶಿವಕುಮಾರ್ (58) ಮೃತ ದುರ್ದೈವಿ.
ಶಿವಕುಮಾರ್ ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ಬೇಟೆಗೆ ತೆರಳಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ. ರಾತ್ರಿ ವೇಳೆ 6 ಮಂದಿಯ ತಂಡ ಕಾಡು ಪ್ರಾಣಿಗಳ ಬೇಟೆಗೆ ತೆರಳಿತ್ತು. ಈ ವೇಳೆ ಪ್ರಾಣಿಗೆಂದು ಬಿಟ್ಟಿರುವ ಗುಂಡು ಶಿವಕುಮಾರ್ ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದೆ ಎಂದು ಹೇಳಲಾಗುತ್ತಿದೆ.
ಗುಂಡು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೀಗ ಬೇಟೆಗೆ ತೆರಳಿರುವ ಚನ್ನಕೇಶವ , ಚೇತನ್ , ನಂದೀಶ್ , ಮಂಜುನಾಥ್ ರನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು , ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.