-->
ಜನ ಕೇಳಿದ್ದು ಉದ್ಯೋಗ, ಇವರು ಕೊಡುತ್ತಿರುವುದು ಪಾಲಿಸ್ಟಾರ್ ಬಾವುಟ: ಜೆಡಿಎಸ್ ಮುಖಂಡನ ಆಕ್ರೋಶ

ಜನ ಕೇಳಿದ್ದು ಉದ್ಯೋಗ, ಇವರು ಕೊಡುತ್ತಿರುವುದು ಪಾಲಿಸ್ಟಾರ್ ಬಾವುಟ: ಜೆಡಿಎಸ್ ಮುಖಂಡನ ಆಕ್ರೋಶ

ಜನ ಕೇಳಿದ್ದು ಉದ್ಯೋಗ, ಇವರು ಕೊಡುತ್ತಿರುವುದು ಪಾಲಿಸ್ಟಾರ್ ಬಾವುಟ: ಜೆಡಿಎಸ್ ಮುಖಂಡನ ಆಕ್ರೋಶ







ಜನರು ವಾಸಿಸಲು ಮನೆ, ಉದ್ಯೋಗ ಕೇಳಿದರೆ, ನೀವು ಧ್ವಜ ಕೊಡುತ್ತಿದ್ದೀರಿ. ಧ್ವಜ ಕೊಡುವ ಬದಲು ಪ್ರತಿ ಮನೆಗೂ ಉದ್ಯೋಗ ಕೊಡಿ. ಪ್ರತಿ ಮನೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿ ಎಂದು ಎಂದು ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.



ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಹಸ್ರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಅಂಥವರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಅವರು ಎಲ್ಲಿಂದ ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.



ನಿಮ್ಮ ಮನೆಗಳ ಮೇಲೆ ಹಾರಿಸಿ ಎಂದು ರಾಷ್ಟ್ರಧ್ವಜ ನೀಡುತ್ತೀರಿ. ಆದರೆ, ಸಹಸ್ರಾರು ಮಂದಿ ಮನೆ ಮಠ ಕಳದುಕೊಂಡಿದ್ದಾರೆ. ಮಹಾಮಳೆಗೆ ಮನೆಗಳು ಧರೆಗೆ ಉರುಳಿ ಬಿದ್ದಿವೆ. ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡುವ ಕಡೆ ಆದ್ಯ ಗಮನ ನೀಡಿ... ಸಾಕಷ್ಟು ಜನರಿಗೆ ಮನೆಯೇ ಇಲ್ಲ. ನಿರಾಶ್ರಿತರು, ಮನೆ ಕಳೆದುಕೊಂಡವರು ಎಲ್ಲಿ ಧ್ವಜ ಹಾರಿಸಬೇಕು ಎಂಬುದು ಜನರ ಪ್ರಶ್ನೆಯಾಗಿದೆ. ನಿಮ್ಮ ಕೆಲಸದ ಮೂಲಕ ಅವರ ಪ್ರಶ್ನೆಗಳಿಗೆ ಉತ್ತರಿಸುವಿರಾ? ಎಂದು ಅವರು ಸವಾಲು ಹಾಕಿದರು.



ನೋಟು ಅಮಾನ್ಯ ಹಾಗೂ ಕೊರೋನಾ ಸೋಂಕು, ಲಾಕ್‌ಡೌನ್‌ನಿಂದಾಗಿ ಜನರ ಬಾಳು ಹಾಳಾಗಿದೆ. ಬೆಲೆ ಏರಿಕೆ, ಹಣದುಬ್ಬರ ನಿಯಂತ್ರಣ ಮಾಡಲಾಗದ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಜನರ ಮೇಲೆ ಪ್ರೀತಿ ಇಲ್ಲವೇ..? ದೇಶ ಎಂದರೆ ಜನ... ಮೊದಲು ಅವರಿಗೆ ಆಹಾರ, ಉದ್ಯೋಗ ಭದ್ರತೆ ನೀಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.




ಭಾರತದ ದೇಶದ ಉದ್ದಗಲಕ್ಕೆ ಹಲವಾರು ನಗರಗಳಲ್ಲಿ ಜನ ಆಶ್ರಯವಿಲ್ಲದೇ ರಸ್ತೆ ಬದಿ ಮಲಗುವ ಪರಿಸ್ಥಿತಿ ಬಂದಿದೆ. ಅಂತಹ ನೂರಾರು ಮಂದಿ ಬಡ ನಿರಾಶ್ರಿತರಿಗೆ ಆಶ್ರಯ ನೀಡಿ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವೇ ಹೊರತು, ಬಾವುಟ ಕೊಡುವುದರಿಂದ ಏನೂ ಆಗಲ್ಲ. ದೇಶ ಎಂದರೆ ಜನ... ಜನರ ಉದ್ದಾರವೇ ದೇಶದ ಉದ್ದಾರ ಎಂಬುದನ್ನು ಮೊದಲು ಅರಿತುಕೊಳ್ಳಿ. ಅಭಿವೃದ್ಧಿಯತ್ತ ಗಮನ ನೀಡಿ ಎಂದು ಅವರು ಒತ್ತಾಯಿಸಿದರು.

Ads on article

Advertise in articles 1

advertising articles 2

Advertise under the article