Kadaba:- ಕಡಬದ ಆತೂರಿನಲ್ಲಿ ಇತ್ತಂಡಗಳ ಮಧ್ಯೆ ಗಲಾಟೆ. ಚೂರಿ ಇರಿತ. ಆರೋಪಿ ಬಂಧನ.
Tuesday, August 16, 2022
ಕಡಬ
ಆರು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಮೀನು ಅಂಗಡಿ ಧ್ವಂಸ ಹಾಗೂ ಮಾರಕಾಸ್ತ್ರ ದಾಳಿ ಪ್ರಕರಣ ಸಂಭಂದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನುವ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಚುಚ್ಚಿದ ಘಟನೆ ಕಡಬ ಕೊಯಿಲ ಗ್ರಾಮದ ಎಂತಾರು ಎಂಬಲ್ಲಿ ತಡರಾತ್ರಿ ನಡೆದಿದೆ.
ನೌಫಾಲ್ ಹಾಗೂ ನವಾಜ್ ಮಧ್ಯೆ ಈ ಗಲಾಟೆ ನಡೆದಿದ್ದು ಈ ವೇಳೆ ನೌಫಾಲ್ ಎಂಬಾತ ನವಾಜ್'ನ ಹೊಟ್ಟೆಗೆ ಚೂರಿಯಿಂದ ಇರಿದಿದ್ದು ಪರಿಣಾಮ ನವಾಜ್ ಗೆ ತೀವ್ರವಾದ ಗಾಯವಾಗಿದ್ದು ಸದ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸದ್ಯ ಈ ಕುರಿತು ನವಾಜ್ ಎಂಬಾತ ನೌಫಾಲ್ ವಿರುದ್ಧ ಕಡಬ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ನೌಫಲ್ ನನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರಿದಿದೆ.