ಕಟೀಲು ಬಸ್ ನಿಲ್ದಾಣ ಅಂಗಡಿ ಮಳಿಗೆಗಳ ಏಲಂ: ಆಸಕ್ತರಿಗೆ ಇಲ್ಲಿದೆ ಮಾಹಿತಿ
ಕಟೀಲು ಬಸ್ ನಿಲ್ದಾಣ ಅಂಗಡಿ ಮಳಿಗೆಗಳ ಏಲಂ: ಆಸಕ್ತರಿಗೆ ಇಲ್ಲಿದೆ ಮಾಹಿತಿ
ದಕ್ಷಿಣ ಕನ್ನಡದ ಸುಪ್ರಸಿದ್ಧ ಧಾರ್ಮಿಕ ಕೇಂದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಇಲ್ಲಿನ ಬಸ್ ನಿಲ್ದಾಣದ ಬಳಿ ಇರುವ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ನಡೆಸುವ ಬಗ್ಗೆ ಏಲಂ ಪ್ರಕ್ರಿಯೆ ನಡೆಯುತ್ತಿದೆ.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನದಲ್ಲಿ ಕೋಟ್ಯಂತರ ಭಕ್ತರು ಪೂಜೆ ಸಲ್ಲಿಸುತ್ತಾರೆ.
27 ಅಂಗಡಿ ಮಳಿಗೆಗಳನ್ನು ಐದು ವರ್ಷಗಳ ಕಾಲದ ಅವಧಿಗೆ ವ್ಯಾಪಾರ ನಡೆಸಲು ವರ್ತಕರಿಗೆ ಅವಕಾಶ ಮಾಡಿಕೊಡಲಾಗಿದೆ. ಠೇವಣಿ ರೂ. 10,000/- ಆಗಿದ್ದು, ಸೆಪ್ಟೆಂಬರ್ 7ರಂದು ಏಲಂ ಪ್ರಕ್ರಿಯೆ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಅನುವಂಶೀಯ ಮೊಕ್ತೇರರು ಮತ್ತು ಅಧ್ಯಕ್ಷರು ಹೊರಡಿಸಿರುವ ಪ್ರಕಟಣೆ ತಿಳಿಸಿದೆ.
ಕ್ರಮಾಂಕ: ಕದುಪದೇ/ಎಲ್‌ಎನ್‌ಡಿ/ಸಿಆರ್04/2022-23 Dated: 21-08-2022
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಕಟೀಲು ಅಂಚೆ, ಮೂಲ್ಕಿ ತಾಲೂಕು, ದ.ಕ. - 574148
ದೂರವಾಣಿ: 7411534591, 8904905361