-->
ಕೃಷ್ಣಧಿನಿ ಜನ್ಮಾಷ್ಟಮಿ ದಿನದಂದು ಎಲ್ಲಾ ರಾಶಿಯವರು ಈ ಕೆಲಸ ಮಾಡಿದರೆ ಒಳ್ಳೆಯದು..!!

ಕೃಷ್ಣಧಿನಿ ಜನ್ಮಾಷ್ಟಮಿ ದಿನದಂದು ಎಲ್ಲಾ ರಾಶಿಯವರು ಈ ಕೆಲಸ ಮಾಡಿದರೆ ಒಳ್ಳೆಯದು..!!


ಮೇಷ: ಕೃಷ್ಣ ಜನ್ಮಾಷ್ಟಮಿಯ ದಿನದಂದು ಮೇಷ  ರಾಶಿಯವರು ಗೋಧಿಯನ್ನು ದಾನ ಮಾಡಬೇಕು. ಹಾಗೆಯೇ ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿ.

ವೃಷಭ: ಕೃಷ್ಣ ಜನ್ಮಾಷ್ಟಮಿಯ ದಿನ ವೃಷಭ ರಾಶಿಯವರು ಸಕ್ಕರೆಯನ್ನು ದಾನ ಮಾಡಬೇಕು. 

ಮಿಥುನ:ಕೃಷ್ಣ ಜನ್ಮಾಷ್ಟಮಿಯ ದಿನದಂದು ಮಿಥುನ ರಾಶಿಯವರು ಬಡವರು ಮತ್ತು ನಿರ್ಗತಿಕರಿಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕು. 

ಕರ್ಕ ರಾಶಿ ::ಕೃಷ್ಣ ಜನ್ಮಾಷ್ಟಮಿಯ ದಿನದಂದು ಈ ರಾಶಿಯವರು ಜನ್ಮಾಷ್ಟಮಿಯ ದಿನ ಅನ್ನ ದಾನ ಮಾಡಿದರೆ ಜೀವನದಲ್ಲಿ ಸುಖ ಸಂತೋಷ ಬರುತ್ತದೆ. 

ಸಿಂಹ: ಜನ್ಮಾಷ್ಟಮಿಯ ದಿನ ಸಿಂಹ ರಾಶಿಯವರು ಬೆಳಗ್ಗೆಯಿಂದ ಶ್ರೀ ಆದಿತ್ಯ ಹೃದಯ ಶ್ರುತ್ ಪಠಿಸಿ ನಂತರ ಬೆಲ್ಲವನ್ನು ದಾನ ಮಾಡಬೇಕು. 

ಕನ್ಯಾ: ಕೃಷ್ಣ ಜನ್ಮಾಷ್ಟಮಿಯ ದಿನ ಕನ್ಯಾ ರಾಶಿಯವರು ಬಡವರಿಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕು. ಕೃಷ್ಣನಿಗೆ ಪಂಚಾಮೃತ ಅರ್ಪಿಸಬೇಕು. 

ತುಲಾ : ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ತುಲಾ ರಾಶಿಯವರು ಬಡವರಿಗೆ ಬಟ್ಟೆ ನೀಡಬೇಕು. ಕೃಷ್ಣನಿಗೆ ಪಂಚಾಮೃತ ಅರ್ಪಿಸಬೇಕು. ಹಣ್ಣುಗಳನ್ನು ದಾನ ಮಾಡುವುದರಿಂದಲೂ ಪ್ರಯೋಜನವಾಗಲಿದೆ. 


ವೃಶ್ಚಿಕ: ಜನ್ಮಾಷ್ಟಮಿಯಂದು ವೃಶ್ಚಿಕ ರಾಶಿಯವರು ಗೋಧಿಯನ್ನು ನಿರ್ಗತಿಕರಿಗೆ ದಾನ ಮಾಡಬೇಕು. ಕೃಷ್ಣನಿಗೆ ಪಂಚಾಮೃತ ಅರ್ಪಿಸಬೇಕು. 

ಧನು ರಾಶಿ : ಜನ್ಮಾಷ್ಟಮಿಯ ದಿನದಂದು ಧನು ರಾಶಿಯವರು ದೇವಸ್ಥಾನಗಳಲ್ಲಿ ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಬೇಕು. ಅಗತ್ಯವಿರುವವರಿಗೆ ಪುಸ್ತಕಗಳನ್ನು ಸಹ ನೀಡಬಹುದು. 

ಮಕರ: ಮಕರ ರಾಶಿಯವರು ಜನ್ಮಾಷ್ಟಮಿಯ ದಿನದಂದು ಎಳ್ಳನ್ನು ದಾನ ಮಾಡಬೇಕು. ಕೃಷ್ಣನಿಗೆ ಪಂಚಾಮೃತ ಅರ್ಪಿಸಬೇಕು. 

ಕುಂಭ: ಕುಂಭ ರಾಶಿಯವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಅನ್ನ ಅಥವಾ ಎಳ್ಳನ್ನು ದಾನ ಮಾಡಬೇಕು. ಗೀತೆಯ ಐದನೇ ಮತ್ತು ಎಂಟನೇ ಅಧ್ಯಾಯಗಳನ್ನು ಅಧ್ಯಯನ ಮಾಡಿ. 

ಮೀನ: ಮೀನ ರಾಶಿಯವರು ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ನವಿಲು ಗರಿ ಮತ್ತು ಕೊಳಲನ್ನು ಅರ್ಪಿಸಬೇಕು. ಇದರೊಂದಿಗೆ ಮಕ್ಕಳಿಗೆ ಮತ್ತು ಬಡವರಿಗೆ ಬಾಳೆಹಣ್ಣುಗಳನ್ನು ದಾನ ಮಾಡಿ.  

Ads on article

Advertise in articles 1

advertising articles 2

Advertise under the article