ಇನ್ನು ಮುಂದೆ ಈ ನಾಲ್ಕು ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿ...!!
Tuesday, August 16, 2022
ಮಿಥುನ ರಾಶಿ: ಮುಂಬರುವ ನಾಲ್ಕು ತಿಂಗಳು ಮಿಥುನ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತ ಅವಧಿ. ಈ ಸಮಯದಲ್ಲಿ ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಒಳ್ಳೆಯ ಜನರ ಸಂಪರ್ಕವು ಲಾಭವನ್ನು ತರುತ್ತದೆ.
ಸಿಂಹ ರಾಶಿ: ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ನಿಮ್ಮ ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು, ಆರ್ಥಿಕವಾಗಿ ಬಲಗೊಳ್ಳುವಿರಿ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಲಿದೆ. ಹೊಸ ಮನೆ-ಕಾರು ಖರೀದಿಸುವ ಯೋಗವೂ ಇದೆ. ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಯೋಚಿಸುತ್ತಿದ್ದರೆ ಇದು ಶುಭ ಸಮಯ.
ತುಲಾ ರಾಶಿ: ತುಲಾ ರಾಶಿಯವರಿಗೆ ಈ ನಾಲ್ಕು ತಿಂಗಳು ತುಂಬಾ ಮಂಗಳಕರವಾಗಿರುತ್ತದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿರೀಕ್ಷಿತ ಉದ್ಯೋಗ ಪ್ರಾಪ್ತಿಯಾಗಲಿದೆ. ವೃತ್ತಿ ಬದಲಾಯಿಸಲು ಚಿಂತಿಸುತ್ತಿರುವವರಿಗೂ ಇದು ಉತ್ತಮ ಸಮಯ.
ವೃಶ್ಚಿಕ ರಾಶಿ: ಈ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಧರ್ಮ ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪರೀಕ್ಷೆ-ಸಂದರ್ಶನದಲ್ಲಿ ನೀವು ಯಶಸ್ವಿಯಾಗುತ್ತೀರಿ. ವೃತ್ತಿ ರಂಗದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ.