ಜಿಲ್ಲಾ ವಕ್ಫ್ ಉಪಾಧ್ಯಕ್ಷರಿಂದ ಹೆಗ್ಗಡೆ ಅವರಿಗೆ ಗೌರವಾರ್ಪಣೆ
ಜಿಲ್ಲಾ ವಕ್ಫ್ ಉಪಾಧ್ಯಕ್ಷರಿಂದ ಹೆಗ್ಗಡೆ ಅವರಿಗೆ ಗೌರವಾರ್ಪಣೆ
ವಕ್ಫ್ ಜಿಲ್ಲಾ ಉಪಾಧ್ಯಕ್ಷ ಪಕೀರಬ್ಬ ಮರೋಡಿ ಅವರಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ
ರಾಜ್ಯ ಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಕರ್ನಾಟಕ ವಕ್ಫ್ ಮಂಡಳಿಯ ಜಿಲ್ಲಾ ಉಪಾಧ್ಯಕ್ಷರೂ ಆಗಿರುವ, ಸಮಾಜ ಸೇವಕ ಹಾಗೂ ಮಾಸ್ಟರ್ ಫ್ಲವರ್ಸ್ ಮಾಲಕ ಫಕೀರಬ್ಬ ಮರೋಡಿ ಅವರು ಗೌರವಿಸಿದರು.
ವೇಣೂರು ಸಹಕಾರಿ ಸಂಘ ನಿಯಮಿತ ಇದರ ನಿವೃತ್ತ ಸಿಇಒ ಹಾಗೂ ಪತ್ರಕರ್ತ ಎಚ್ ಮುಹಮ್ಮದ್ ವೇಣೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಫಕೀರಬ್ಬ ಅವರು ಪ್ರಾಕೃತಿಕ ಹೂವುಗಳುಳ್ಳ ವಿಶೇಷ ಅಲಂಕಾರ ಮಾಡಿದ ಹೂಗುಚ್ಚವನ್ನು ನೀಡಿ ಗೌರವಿಸಿದರು.
ಮಂಗಳೂರಿನಲ್ಲಿ ಹೂವಿನ ಅಲಂಕಾರಕ್ಕೆ ಹೆಸರುವಾಸಿಯಾಗಿರುವ ಫಕೀರಬ್ಬ ಮರೋಡಿ ಅವರು ಒಬ್ಬ ಯಶಸ್ವಿ ಉದ್ಯಮಿಯಾಗಿದ್ದು, ಶ್ರವಣಬೆಳಗೊಳ ಮತ್ತು ಧರ್ಮಸ್ಥಳ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ತಮ್ಮ ಮಾಸ್ಟರ್ ಫ್ಲವರ್ಸ್ ಸಂಸ್ಥೆಯ ಮೂಲಕ ಹೂವಿನ ಅಲಂಕಾರದ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿಭಾಯಿಸಿರುತ್ತಾರೆ.