ವಕ್ಫ್ ಜಿಲ್ಲಾ ಉಪಾಧ್ಯಕ್ಷ ಪಕೀರಬ್ಬ ಮರೋಡಿ ಅವರಿಂದ ಡಾ.ರಾಜೇಂದ್ರ ಕುಮಾರ್ ಭೇಟಿ: ಅಭಿನಂದನೆ
Sunday, August 21, 2022
ವಕ್ಫ್ ಜಿಲ್ಲಾ ಉಪಾಧ್ಯಕ್ಷ ಪಕೀರಬ್ಬ ಮರೋಡಿ ಅವರಿಂದ ಡಾ.ರಾಜೇಂದ್ರ ಕುಮಾರ್ ಭೇಟಿ: ಅಭಿನಂದನೆ
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಇದರ ದ.ಕ ಜಿಲ್ಲಾ ಸಲಹಾ ಮಂಡಳಿಗೆ ಉಪಾಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡಿರುವ ಖ್ಯಾತ ಉದ್ಯಮಿ, ಸಾಮಾಜಿಕ ಸೇವಾಕರ್ತರಾದ ಪಕೀರಬ್ಬ ಮರೋಡಿ ಅವರು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರೂ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷರು ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿರುವ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿದ ರಾಜೇಂದ್ರ ಕುಮಾರ್ ಅವರು, ಉದ್ಯಮಿ ಹಾಗೂ ಸಮಾಜ ಸೇವಕರಾದ, ಮಾಸ್ಟರ್ ಫ್ಲವರ್ಸ್ ಮಂಗಳೂರು ಮಾಲಿಕ ಪಕೀರಬ್ಬ ಮರೋಡಿ ಅವರನ್ನು ಮರು ಅಭಿನಂದಿಸಿದರು.
ಕಾಶಿಪಟ್ಣ ದಾರುನ್ನೂರು ಸಹಿತ ತಾವು ಸೇವೆ ಸಲ್ಲಿಸುವ ತಮ್ಮ ಸೇವಾ ಸಂಸ್ಥೆಗಳ ಕಾರ್ಯಚಟುವಟಿಕೆಗಳು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಅವರು ಆಶಿಸಿದರು.