ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನಾಪತ್ತೆಯಾದ ಛತ್ತಿಸ್ ಗಡ ಮೂಲದ ಕಾರ್ಮಿಕ
Sunday, August 7, 2022
ಬಂಟ್ವಾಳ: ಕೈಕಾಲು ತೊಳೆಯಲೆಂದು ನೇತ್ರಾವತಿ ನದಿಗಿಳಿದ ಛತ್ತಿಸ್ ಗಡ್ ಮೂಲದ ಕಾರ್ಮಿಕನೋರ್ವನು ಆಯತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಬಿ.ಸಿ.ರೋಡ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಛತ್ತೀಸ್ ಗಡ್ ರಾಜ್ಯದ ಬಸ್ತರ ಜಿಲ್ಲೆಯ ಬಡ್ಡೆಬಂದಮ ಗ್ರಾಮದ ಜಮ್ಮವಾಡ ನಿವಾಸಿ ಆನಂದ ಕಶ್ಯಪ( 28 ) ನೇತ್ರಾವತಿ ನದಿಯಲ್ಲಿ ನಾಪತ್ತೆಯಾಗಿರುವ ಯುವಕ.
ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ರೈಲ್ವೆ ಸ್ಟೇಷನ್ ನ ಪಕ್ಕದಲ್ಲಿ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯುತ್ತಿತ್ತು. ಇಲ್ಲಿ ಛತ್ತೀಸ್ ಗಡ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಆನಂದ ಕಶ್ಯಪ ಕೆಲಸ ಮುಗಿಸಿ ಅಲ್ಲಿಯೇ ಸಮೀಪದಲ್ಲಿದ್ದ ನೇತ್ರಾವತಿ ನದಿಗೆ ಕೈಕಾಲು ತೊಳೆಯಲೆಂದು ನೀರಿಗಿಳಿದಿದ್ದಾರೆ. ಈ ವೇಳೆ ಅವರು ಆಯತಪ್ಪಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆನಂದ್ ಕಶ್ಯಪ್ ಗಾಗಿ ಶೋಧ ಮುಂದುವರಿದಿದೆ.