-->
ಮಂಗಳೂರು: ಪೊಲೀಸ್ ಮೇಲೆ ದಾಳಿಗೆ ಮುಂದಾದ ಹಲವು ಪ್ರಕರಣಗಳ ಆರೋಪಿ: ಹೆಡೆಮುರಿಕಟ್ಟಿ ಬಂಧಿಸಿದ ಖಾಕಿಪಡೆ

ಮಂಗಳೂರು: ಪೊಲೀಸ್ ಮೇಲೆ ದಾಳಿಗೆ ಮುಂದಾದ ಹಲವು ಪ್ರಕರಣಗಳ ಆರೋಪಿ: ಹೆಡೆಮುರಿಕಟ್ಟಿ ಬಂಧಿಸಿದ ಖಾಕಿಪಡೆ

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿಯನ್ನು ನ್ಯಾಯಾಲಯದ ವಾರಂಟ್ ಅನ್ವಯ ಬಂಧಿಸಲು ಹೋಗಿದ್ದ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ, ಚಾಕುವಿನಿಂದ ತಿವಿದು ಪರಾರಿಯಾಗಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ.

ಮೂಡುಬಿದಿರೆ ತಾಲೂಕಿನ ತೋಡಾರು ಹಿದಾಯತ್ ನಗರದ ಮೊಹಮ್ಮದ್ ಫೈಝಲ್(33) ಬಂಧಿತ ಆರೋಪಿ. 

ಮೊಹಮ್ಮದ್ ಫೈಝಲ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಿದ್ದ. ಆದ್ದರಿಂದ ಆರೋಪಿಯನ್ನು ನ್ಯಾಯಾಲಯದ ವಾರೆಂಟ್ ನಂತೆ ಬಂಧಿಸುವ ಉದ್ದೇಶದಿಂದ ಆತನ ಮನೆಗೆ ಪೊಲೀಸರು ಆಗಮಿಸಿದ್ದರು. ಆದರೆ ಈ ವೇಳೆ ಆರೋಪಿಯ ತಂದೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯೊಳಗೆ ಹೋಗದಂತೆ ತಳ್ಳಿದ್ದಾರೆ‌. ಈ ವೇಳೆ ಮೊಹಮ್ಮದ್‌ ಫೈಝಲ್ ಹಿಂಬಾಗಿಲಿನಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ‌. 

ತಕ್ಷಣ ಕಾರ್ಯೋನ್ಮುಖರಾದ ಪೊಲೀಸ್ ಕಾನ್ ಸ್ಟೇಬಲ್ ಅಯ್ಯಪ್ಪ ಎಂಬವರು ಆರೋಪಿಯನ್ನು ಹಿಡಿಯಲೆತ್ನಿಸಿದ್ದಾರೆ. ಈ ವೇಳೆ ಫೈಝಲ್ ತನ್ನ ಕೈಯ್ಯಲ್ಲಿದ್ದ ಮಾರಕಾಯುಧದಿಂದ ಅವರಿಗೆ ತಿವಿಯಲು ಯತ್ನಿಸಿದ್ದಾನೆ‌. ತಕ್ಷಣ ತಪ್ಪಿಸಿಕೊಂಡಿ ಅವರ ಕೈಗೆ ಸ್ವಲ್ಪ ಗಾಯವಾಗಿದೆ. ಈ ವೇಳೆ ಎಎಸ್ಐ ರಾಜೇಶ್ ಅವರು ಸಹಾಯಕ್ಕೆ ಆಗಮಿಸಿದ್ದಾರೆ‌. ಆಗ ಅವರಿಗೂ ಮಾರಕಾಯುಧ ತೋರಿಸಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಓಡಿ ಹೋಗಿದ್ದಾನೆ. ಬಳಿಕ ಪೊಲೀಸರು ಹೆಚ್ಚಿನ ಸಿಬ್ಬಂದಿಯೊಂದಿಗೆ ಆಗಮಿಸಿ ಆರೋಪಿಯನ್ನು ಹುಡುಕಾಡಿದಾಗ ಆತ ತೋಡಾರಿನ ಮಸೀದಿಯ ಹಿಂಭಾಗದ ಹಾಡಿಯಲ್ಲಿ ಬಚ್ಚಿಟ್ಟುಕೊಂಡಿರುವುದನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ‌. 

ಕರ್ತವ್ಯಕ್ಕೆ ಅಡ್ಡಿಪಡಿಸಿದ ಈತನ‌ ತಂದೆ ಹಾಗೂ ಆರೋಪಿ ಮೊಹಮ್ಮದ್‌ ಫೈಝಲ್ ಮೇಲೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article