-->
ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಜ್ಞೆತಪ್ಪುವ ಪಾನೀಯ ನೀಡಿ ಯುವತಿಯ ಅತ್ಯಾಚಾರ: ಮೂವರು ಕಾಮುಕರು ಅಂದರ್

ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಜ್ಞೆತಪ್ಪುವ ಪಾನೀಯ ನೀಡಿ ಯುವತಿಯ ಅತ್ಯಾಚಾರ: ಮೂವರು ಕಾಮುಕರು ಅಂದರ್

ಗಾಝಿಯಾಬಾದ್ : ಹುಟ್ಟುಹಬ್ಬದ ಪಾರ್ಟಿಗೆ ಬಂದಿದ್ದ ಯುವತಿಗೆ ಪ್ರಜ್ಞೆತಪ್ಪುವ ಪದಾರ್ಥ ಬೆರೆಸಿರುವ ಪಾನೀಯ ಕುಡಿಸಿ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಗಾಝಿಯಾಬಾದ್ ಜಿಲ್ಲೆಯ ಮೋದಿ ನಗರದಲ್ಲಿ ನಡೆದಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಶೇಖರ್ , ಕೃಷ್ಣ ಮತ್ತು ಅರ್ಜುನ್ ಎಂಬ ಮೂವರು ಕಾಮುಕ ಯುವಕರನ್ನು ಬಂಧಿಸಿದ್ದಾರೆ.

ಖಾಸಗಿ ಕಂಪನಿಯ ನೌಕರೆಯಾಗಿದ್ದ ಯುವತಿ ರವಿವಾರ ರಾತ್ರಿ ಹುಟ್ಟುಹಬ್ಬದ ಪಾರ್ಟಿಯೊಂದಕ್ಕೆ ಹೋಗಿದ್ದರು. ಆಗ ಆಕೆಗೆ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿದ ಪಾನೀಯ ನೀಡಲಾಗಿತ್ತು. ಬಳಿಕ ಕಾಮುಕರಲ್ಲೋರ್ವನು ಆಕೆಯನ್ನು ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ತನ್ನ ಸ್ನೇಹಿತರನ್ನೂ ಕರೆದು ಒಬ್ಬರಾದ ಬಳಿಕ ಮತ್ತೊಬ್ಬರಂತೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿಗೆ ಪ್ರಜ್ಞೆ ಮರುಕಳಿಸಿದ ಬಳಿಕ ಆಕೆ ಪ್ರತಿರೋಧವೊಡ್ಡಿದರೂ, ಆರೋಪಿಗಳು ಆಕೆಯನ್ನು ಥಳಿಸಿ ಈ ವಿಷಯವನ್ನು ಬಹಿರಂಗಪಡಿಸಬಾರದೆಂದು ಕೊಲೆ ಬೆದರಿಕೆ ಹಾಕಿದ್ದಾರೆ. ಬಳಿಕ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಮನೆಗೆ ಬಂದ ಯುವತಿ ಕುಟುಂಬದವರೊಂದಿಗೆ ವಿಚಾರ ತಿಳಿಸಿದ್ದಾರೆ. ಸೋಮವಾರ ತಂದೆಯ ಜತೆ ಮೋದಿ ನಗರ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಲಾಗಿದ್ದು , ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ವೈದ್ಯಕೀಯ ವರದಿ ದೃಢಪಡಿಸಿದೆ. ಆರೋಪಿಗಳಾದ ಶೇಖರ್ , ಕೃಷ್ಣ ಮತ್ತು ಅರ್ಜುನ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಗ್ರಾಮೀಣ ಎಎಸ್ಪಿ ಐರಾಜ್ ರಾಜಾ ಹೇಳಿದ್ದಾರೆ .

Ads on article

Advertise in articles 1

advertising articles 2

Advertise under the article