
ಒಳ ಉಡುಪು ತೆಗೆದು ಪರೀಕ್ಷೆ ಬರೆದ ವಿವಾದ: ಸಮಸ್ಯೆಯಾದವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ
ಒಳ ಉಡುಪು ತೆಗೆದು ಪರೀಕ್ಷೆ ಬರೆದ ವಿವಾದ: ಸಮಸ್ಯೆಯಾದವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ
ಕೇರಳದ ನೀಟ್ ಪರೀಕ್ಷೆ ವೇಳೆ ಒಳಉಡುಪು ತೆಗೆಸಿ ಪರೀಕ್ಷೆ ಬರೆಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ವಿದ್ಯಾರ್ಥಿನಿಯರು ಒಳ ಉಡುಪು ತೆಗೆದು ಪರೀಕ್ಷೆ ಬರೆಯಲಾಗದೇ ಸಮಸ್ಯೆಗೊಳಗಾದ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಮರು ಪರೀಕ್ಷೆ ಸೆಪ್ಟಂಬರ್ 4ರಂದು ನಡೆಯಲಿದೆ.
ಕಳೆದ ಜೂನ್ 17ರಂದು ನಡೆದ ನೀಟ್ ಪರೀಕ್ಷೆ ವೇಳೆ ಕೇರಳದ ಕೊಲ್ಲಂನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಪರೀಕ್ಷೆ ಬರೆಯಲು ಪರೀಕ್ಷಾಧಿಕಾರಿಯವರು ವಿವಾದಾತ್ಮಕ ಸೂಚನೆ ನೀಡಿದ್ದರು.
ಪರೀಕ್ಷಾ ಕೇಂದ್ರಕ್ಕೆ ನೀಟ್ ಎಕ್ಸಾಂ ಬರೆಯಲು ಬಂದ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಲಾಗಿತ್ತು. ವಿದ್ಯಾರ್ಥಿನಿಯರು ತಮ್ಮ ಒಳ ಉಡುಪು ತೆಗೆದು ಬರಬೇಕು, ಆಗ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಎಂದು ಹೇಳಲಾಗಿತ್ತು.
ಮಾನಸಿಕವಾಗಿ ನೊಂದರೂ ವಿದ್ಯಾರ್ಥಿನಿಯರು ಪರೀಕ್ಷೆ ಬರೆದು ಬಂದಿದ್ರು. ಬಳಿಕ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆ ಎದುರಿನಲ್ಲಿ ಈ ವಿಚಾರವನ್ನು ಹೇಳಿಕೊಂಡಾಗ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ನೀಡಿದ ದೂರನ್ನು ಆಧರಿಸಿ ಇಲಾಖಾ ತನಿಖೆ ನಡೆಸಿದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (NTA), ಪರೀಕ್ಷಾ ಕೇಂದ್ರದ ಐವರು ಮಹಿಳಾ ಸಿಬ್ಬಂದಿ ಸಹಿತ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲು ಶಿಫಾರಸು ಮಾಡಿತ್ತು.
ಅದೇ ರೀತಿ, ರಾಜಸ್ತಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ತಲಾ ಎರಡು ಪರೀಕ್ಷಾ ಕೇಂದ್ರದಲ್ಲಿ ಇದೇ ರೀತಿಯ ಸಮಸ್ಯೆ ಸೃಷ್ಟಿಸಲಾಗಿತ್ತು. ಆ ಕೇಂದ್ರಗಳಲ್ಲೂ ಮರು ಪರೀಕ್ಷೆ ನಡೆಸಲಾಗುವುದು ಅಂತಾ NTA ತಿಳಿಸಿದೆ.