
ಮುಕೇಶ್ ಅಂಬಾನಿ ರಿಲಯನ್ಸ್ ಸಂಸ್ಥೆಯ ಉತ್ತರಾಧಿಕಾರ ಮಕ್ಕಳಿಗೆ ಹಸ್ತಾಂತರ: ಪುತ್ರಿಗೆ ರಿಟೇಲ್, ಪುತ್ರನಿಗೆ ಇಂಧನ ಘಟಕ
Tuesday, August 30, 2022
ಮುಂಬೈ: ಭಾರತದ ಪ್ರಖ್ಯಾತ ಉದ್ಯಮಿ ಮುಖೇಶ್ ಅಂಬಾನಿಯವರು ರಿಲಯನ್ಸ್ ಸಂಸ್ಥೆಯ ತಮ್ಮ ಉತ್ತರಾಧಿಕಾರವನ್ನು ಇಬ್ಬರು ಮಕ್ಕಳಿಗೆ ಹಸ್ತಾಂತರಿಸಿದ್ದಾರೆ. ಹಿರಿಯ ಪುತ್ರ ಆಕಾಶ್ ಹಾಗೂ ಪುತ್ರಿ ಇಶಾ ಅವರಿಗೆ ದೂರಸಂಪರ್ಕ ಮತ್ತು ರಿಟೇಲ್ ಜವಾಬ್ದಾರಿಯನ್ನು ಹಾಗೂ ಕಿರಿಯ ಪುತ್ರ ಅನಂತ್‌ಗೆ ನೂತನ ಇಂಧನ ಘಟಕದ ಜವಾಬ್ದಾರಿಯನ್ನು ನೀಡಿರುವುದಾಗಿ ಘೋಷಣೆ ಮಾಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿ.ನ 45ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ಅಂಬಾನಿ ತಮ್ಮ ಪುತ್ರಿ ಇಶಾ ಅವರನ್ನು ರಿಟೇಲ್ ಘಟಕದ ಅಧ್ಯಕ್ಷೆಯಾಗಿಯನ್ನಾಗಿ ನೇಮಿಸಿದ್ದಾರೆ. ಈ ಹಿಂದೆ ಅಂಬಾನಿ ಅವಳಿ ಪುತ್ರರಲ್ಲಿ ಓರ್ವರಾದ ಆಕಾಶ್ ಅವರನ್ನು ಮಾತ್ರ ಕಂಪನಿಯ ಕಾರ್ಯಕಾರಿ ಮುಖ್ಯಸ್ಥ ಎಂದು ನೇಮಕ ಮಾಡಿದ್ದರು. ಇದೀಗ ತಮ್ಮ ಉಳಿದಿಬ್ಬರು ಮಕ್ಕಳಿಗೆ ಸಂಸ್ಥೆ ಪ್ರಮುಖ ಜವಾಬ್ದಾರಿಗಳನ್ನು ನೀಡಿಲಾಗಿದೆ ಎಂದು ತಿಳಿಸಿದ್ದಾರೆ .
ಜೂನ್‌ನಲ್ಲಿ, 30 ವರ್ಷದ ಆಕಾಶ್ ಅವರನ್ನು ಜಿಯೋ ಪ್ಲಾಟ್‌ಫಾರ್ಮ್‌ಗಳ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು . ಜಿಯೋ ಇನ್ಫೋಕಾಮ್ ಟೆಲಿಕಾಂ ಪರವಾನಿಗೆಗಳನ್ನು ಹೊಂದಿರುವ ಸಂಸ್ಥೆಯಾಗಿದ್ದು , ಮುಖೇಶ್ ಅಂಬಾನಿ ಜಿಯೋ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷರಾಗಿ ಈಗಲೂ ಮುಂದುವರೆದಿದ್ದಾರೆ . ಜಾಗತಿಕ ತಂತ್ರಜ್ಞಾನ ದೈತ್ಯರಾದ ಗೂಗಲ್ ಮತ್ತು ಫೇಸ್‌ಬುಕ್ ಮಾಲೀಕ ಮೆಟಾ ಇದಕ್ಕೆ ಹೂಡಿಕೆ ಮಾಡಿದ್ದಾರೆ.