Subrahmanya:- ಕುಕ್ಕೆ ಸುಬ್ರಮಣ್ಯ ಕುಮಾರಧಾರ ನದಿಯಲ್ಲಿ ಕಣ್ಮರೆಯಾದ ಯುವಕನ ಮೃತದೇಹ ಪತ್ತೆ.
Wednesday, August 24, 2022
ಸುಬ್ರಹ್ಮಣ್ಯ
ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ಹಾರಿದ್ದ ಬೆಂಗಳೂರು ನಿವಾಸಿ ಯುವಕ ಶಿವು ಯಾನೆ ಸ್ವಾಮಿ ಅವರ ಮೃತದೇಹ ಪತ್ತೆಯಾಗಿದೆ.
ಸತತವಾಗಿ ನಾಲ್ಕು ದಿನದ ಕಾರ್ಯಚರಣೆ ಬಳಿಕ ಇಂದು ಸಂಜೆ ಮೃತದೇಹ ಪತ್ತೆಯಾಗಿದೆ.
ಸುಮಾರು 15 ಜನ ನುರಿತ ಈಜುಗಾರರು, ಸಮಾಜ ಸೇವಕ ರವಿಕಕ್ಕೆಪದವು,ಅಗ್ನಿಶಮಾಕ ದಳ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು ಕಂದಾಯ ಅಧಿಕಾರಿಗಳು, ಗ್ರಹರಕ್ಷಕ ದಳ,ಸ್ಥಳೀಯ ಜನನಾಯಕರು ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸ್ಥಳದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಗ್ರಾ. ಪಂಚಾಯತ್ ಪಿಡಿಓ ಯು. ಡಿ ಶೇಖರ್, ಸುಬ್ರಹ್ಮಣ್ಯ ಗ್ರಾ. ಪಂಚಾಯತ್ ಸದಸ್ಯರು,ಅಗ್ನಿಶಮಾಕದಳದ ಸಿಬಂಧಿಗಳು, ಸ್ಥಳೀಯರು ಉಪಸ್ಥಿತರಿದ್ದರು.