
Sulya:- ಪ್ರವೀಣ್ ನೆಟ್ಟಾರು ನಿಧನದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನ ಸಾವು.!
Tuesday, August 9, 2022
ಸುಳ್ಯ
ಬಿಜೆಪಿ ಯುವ ಮೋರ್ಚಾ ನಾಯಕ ಹಾಗೂ ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಯಾದ ದಿನಗಳ ನಂತರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ, ಪ್ರವೀಣ್ ಅವರ ಸಾಕು ನಾಯಿ ಮೃತಪಟ್ಟಿದೆ.
ಪ್ರವೀಣ್ ಪ್ರಾಣಿ ಪ್ರಿಯರಾಗಿದ್ದರು. ಪ್ರವೀಣ್ ಅವರು ಮೂಕ ಪ್ರಾಣಿಗಳ ನೋವಿಗೆ ಸ್ಪಂದಿಸುವ ಗುಣವನ್ನು ಹೊಂದಿದ್ದರು. ಪ್ರವೀಣ್ ತಮ್ಮ ಮನೆಯಲ್ಲಿ ಶ್ವಾನವೊಂದನ್ನು ಸಾಕಿದ್ದರು.
ಪ್ರವೀಣ್ ನಿಧನದ ಬಳಿಕ ಕೆಲವು ದಿನಗಳಿಂದ ಈ ಶ್ವಾನ ಅನಾರೋಗ್ಯದಿಂದ ನರಳುತ್ತಿತ್ತು ಎನ್ನಲಾಗುತ್ತಿತ್ತು. ಇದೀಗ ಆ ಶ್ವಾನ ಸಾವನ್ನಪ್ಪಿದೆ ಎಂದು ನಮ್ಮ ಬಿಲ್ಲವೆರ್ ಪೇಜ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೀಡಾವುದಕ್ಕೂ ಕೆಲವೇ ದಿನಗಳ ಹಿಂದೆ ಬೀದಿಯಲ್ಲಿದ್ದ ಎರಡು ನಾಯಿ ಮರಿಗಳನ್ನು ರಕ್ಷಿಸಿದ್ದರು. ಈ ಕುರಿತಂತೆ ಸ್ವತಃ ಪ್ರವೀಣ್ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಹಿತ ಮಾಹಿತಿ ಪ್ರಕಟಿಸಿದ್ದರು.ಯಾರೂ ಮೂಕಪ್ರಾಣಿಗಳನ್ನು ದಾರಿಯಲ್ಲಿ ಬಿಡಬೇಡಿ, ಮೂಕಪ್ರಾಣಿಗಳನ್ನು ದಾರಿಯಲ್ಲಿ ಬಿಡುವ ಹೀನಾಯ ಪ್ರವೃತ್ತಿ ಮಾಡಬೇಡಿ ಎಂದೂ ಪ್ರವೀಣ್ ಹೇಳಿಕೊಂಡಿದ್ದರು.