ಮಗ ಹಾಗೂ ಪತಿಯ ಹೆಸರನ್ನು ಕೈಯಲ್ಲಿ ಹಚ್ಚೆ ಹಾಕಿಸಿಕೊಂಡ ನಟಿ ಮೇಘನ ರಾಜ್..!!
Saturday, August 27, 2022
ಮೇಘನಾ ರಾಜ್ ಅವರು ಇದೀಗ ತಮ್ಮ ಪತಿಯ ಹಾಗೂ ತಮ್ಮ ಮಗನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.
ಹೌದು ನೆನ್ನೆಯಷ್ಟೇ ಮೇಘನಾ ರಾಜ್ ಅವರು ತಮ್ಮ ಕೈನ ಮೇಲೆ ಚಿರು ಹಾಗೂ ರಾಯನ್ ಎಂಬ ಹೆಸರಿನ ಆಚೆಯನ್ನು ಹಾಕಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಈ ಇಬ್ಬರು ವ್ಯಕ್ತಿಗಳು ನನ್ನ ಜೀವನಕ್ಕೆ ಬಹಳನೇ ಮುಖ್ಯವಾದದ್ದು ನಾನು ಇವರಿಬ್ಬರನ್ನು ಸಾಯೋವರೆಗೂ ಪ್ರೀತಿಸುತ್ತೇನೆ ಇವರೆಬ್ಬರ ಸ್ಥಾನವನ್ನು ಯಾರಿಂದಲೂ ಕೂಡ ತುಂಬುವುದಕ್ಕೆ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಮೇಘನಾ ರಾಜ್ ನೀವು ಯಾವುದಕ್ಕೂ ಎದೆಗುಂದ ಬೇಡಿ ನೆಟ್ಟಿಗರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಧೈರ್ಯವನ್ನು ಹೇಳಿದ್ದಾರೆ.