-->
ಶ್ರೀಮಂತ ಆಟ ಕ್ರಿಕೆಟ್ ನಲ್ಲಿ ಹೆಸರು ಗಳಿಸಿದ್ದ ವಿನೋದ್ ಕಾಂಬ್ಳಿ ಈಗ ಬಡವ: ಕೆಲಸವಿಲ್ಲದೆ ಪರದಾಡುತ್ತಿರುವ ಬ್ಯಾಟ್ಸ್ ಮೆನ್

ಶ್ರೀಮಂತ ಆಟ ಕ್ರಿಕೆಟ್ ನಲ್ಲಿ ಹೆಸರು ಗಳಿಸಿದ್ದ ವಿನೋದ್ ಕಾಂಬ್ಳಿ ಈಗ ಬಡವ: ಕೆಲಸವಿಲ್ಲದೆ ಪರದಾಡುತ್ತಿರುವ ಬ್ಯಾಟ್ಸ್ ಮೆನ್

ಮುಂಬೈ: ಕ್ರಿಕೆಟ್ ಆಟಗಾರರೆಲ್ಲಾ ಶ್ರೀಮಂತರೆಂಬ ನಂಬಿಕೆ ನಮ್ಮೆಲ್ಲರಲ್ಲಿ ಇದೆ ಆದರೆ ಕ್ರಿಕೆಟಿಗರೆಲ್ಲರೂ ಶ್ರೀಮಂತರಲ್ಲ ಎಂಬುದಕ್ಕೆ ತಾಜಾ ಉದಾಹರಣೆ ವಿನೋದ್ ಕಾಂಬ್ಳಿ. 

ಒಂದು ಕಾಲದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್‌ಗಿಂತಲೂ ಪ್ರತಿಭಾವಂತರೆನಿಸಿಕೊಂಡ ಬ್ಯಾಟ್ಸ್ ಮನ್ ಆಗಿದ್ದವರು ವಿನೋದ್ ಕಾಂಬ್ಳಿ. ಆದರೆ ಇದೀಗ ಕಾಂಬ್ಳಿಯವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ಜೀವನ ನಿರ್ವಹಣೆಗೆ ಬಿಸಿಸಿಐ ನೀಡುವ 30 ಸಾವಿರ ರೂ. ನಿವೃತ್ತಿ ವೇತನವಲ್ಲದೆ ಬೇರೆ ಆಧಾರ ಅವರಿಗಿಲ್ಲ. ಅಲ್ಲದೆ 50 ವರ್ಷ ಪ್ರಾಯದ ವಿನೋದ್ ಕಾಂಬ್ಳಿಯವರು ಸರಿಯಾದ ಉದ್ಯೋಗವೂ ಇಲ್ಲದೆ ಪರದಾಡುತ್ತಿದ್ದಾರೆ. 

ಮುಂಬೈಯ ಮಾಧ್ಯಮದೊಂದಿಗೆ ಮಾತನಾಡಿರುವ ಕಾಂಬ್ಳಿಯವರು 'ನಾನು ಶ್ರೀಮಂತನಾಗಿ ಜನಿಸಲಿಲ್ಲ. ಜೀವನದಲ್ಲಿ ಕ್ರಿಕೆಟ್ ಆಟದಿಂದ ಮಾತ್ರ ನಾನು ಹಣ ಸಂಪಾದಿಸಿದ್ದೇನೆ. ಬಾಲ್ಯದಲ್ಲಿ ಸಾಕಷ್ಟು ಬಡತನ ಕಂಡಿದ್ದೇನೆ. ನಾನು ಉಪವಾಸವಿದ್ದ ದಿನಗಳೂ ಇತ್ತು. ಆದರೆ ಆ ಬಳಿಕ ಶಾರದಾಶ್ರಮ ಶಾಲೆ ಸೇರಿದ ಮೆ ಊಟದ ತೊಂದರೆ ಇರಲಿಲ್ಲ' ಎಂದು ಹೇಳಿಕೊಂಡಿದ್ದಾರೆ. 

ತಾನು ಮದ್ಯ ವ್ಯಸನಿಯೆಂಬ ದೂರನ್ನು ನಿರಾಕರಿಸಿರುವ ಕಾಂಬ್ಳಿಯವರು, ತಮಗೆ ಕುಡಿತದ ಚಟವಿಲ್ಲ. ಆದರೆ ಕೆಲವೊಮ್ಮೆ ಸಮಾರಂಭಗಳಲ್ಲಿ ಮಾತ್ರ ಕುಡಿಯುತ್ತೇನೆ. ವ್ಯಕ್ತಿಯೊಬ್ಬ ಕುಡಿತದ ಅಮಲಿನಲ್ಲಿ ಮುಂಬೈ ಬೀದಿಯಲ್ಲಿ ಓಲಾಡುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು ಮತ್ತು ಅದು ವಿನೋದ್ ಕಾಂಬ್ಳಿ ಎಂದು ಹೇಳಲಾಗಿತ್ತು. ಆದರೆ ಅದು ತಾನಲ್ಲವೆಂದು ಸ್ಪಷ್ಟಪಡಿಸಿದ್ದಾರೆ. 

ಕಾಂಬ್ಳಿ ತಮ್ಮ ಪತ್ನಿ ಆಂಡ್ರಿಯಾರೊಂದಿಗೆ 12 ವರ್ಷದ ಪುತ್ರ ಮತ್ತು 7 ವರ್ಷದ ಪುತ್ರಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. 

ಕೊರೊನಾ ಕಾಲದಲ್ಲಿ ಕಾಂಬ್ಳಿಯವರಿಗೆ ಸಂಕಷ್ಟ ಹೆಚ್ಚಾಗಿತ್ತು. ಹಿಂದೆಲ್ಲ ಕಾಂಬ್ಳಿ ಎಂದರೆ ಕೊರಳಿನಲ್ಲಿ ಚಿನ್ನದ ಸರ, ಕೈಯಲ್ಲಿ ಬ್ರೇಸ್ ಲೆಟ್ ಮತ್ತು ಗ್ರಾಂಡ್ ಕೈಗಡಿಯಾರ ಎದ್ದು ಕಾಣಿಸುತ್ತಿತ್ತು . ಆದರೆ ಈಗ ಅದೆಲ್ಲ ಮಾಯವಾಗಿದ್ದು, ಕೈಯಲ್ಲಿರುವ ಒಂದ ಮೊಬೈಲ್‌ನ ಸ್ಕಿನ್‌ನಲ್ಲೂ ಡ್ಯಾಮೇಜ್‌ಗಳಾಗಿವೆ. ಬಿಳಿ ಗಡ್ಡದಿಂದಾಗಿ ಅವರನ್ನು ಸುಲಭವಾಗಿ ಗುರುತು ಹಿಡಿಯುವುದು ಅಸಾಧ್ಯ.  ಸ್ನೇಹಿತ ಸಚಿನ್ ತೆಂಡೂಲ್ಕರ್ ಗೆ ತನ್ನ ಸಂಕಷ್ಟಗಳ ಬಗ್ಗೆ ಗೊತ್ತಿದೆ. ಆದ್ದರಿಂದ ತಮ್ಮ ತೆಂಡುಲ್ಕರ್ ಮಿಡಲ್‌ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಕೆಲಸವೊಂದನ್ನು ನೀಡಿದ್ದರು. ಆದರೆ ನವಿ ಮುಂಬೈನ ನರೆಲುನಲ್ಲಿ ಈ ಅಕಾಡೆಮಿ ಇದ್ದು, ಅಷ್ಟುದೂರಕ್ಕೆ ಪ್ರತಿ ದಿನ ಓಡಾಡುವುದು ಕಷ್ಟಕರವೆನಿಸಿದ ಕಾರಣ ಆ ಕೆಲಸ ಬಿಟ್ಟೆ ಎಂದು ಕಾಂಬ್ಳಿ ತಿಳಿಸಿದ್ದಾರೆ . 2019 ರ ಮುಂಬೈ ಟಿ 20 ಲೀಗ್‌ನಲ್ಲಿ ಕಾಂಬ್ಳಿ ತಂಡವೊಂದರ ಕೋಚ್ ಆಗಿದ್ದರು . ಆದರೆ ಕರೊನಾ ನಂತರ ಈ ಟೂರ್ನಿ ನಡೆಯದ ಕಾರಣ ಕಾಂಬ್ರಿ ಮತ್ತೆ ನಿರುದ್ಯೋಗಿಯಾಗಿದ್ದಾರೆ . 

Ads on article

Advertise in articles 1

advertising articles 2

Advertise under the article