-->
ಮಂಗಳೂರು: ಬರೋಬ್ಬರಿ 25 ವರ್ಷದ ಬಳಿಕ ಅಂದರ್ ಆದ ಕಾರು ಕಳವು ಆರೋಪಿ

ಮಂಗಳೂರು: ಬರೋಬ್ಬರಿ 25 ವರ್ಷದ ಬಳಿಕ ಅಂದರ್ ಆದ ಕಾರು ಕಳವು ಆರೋಪಿ

ಮಂಗಳೂರು: ಬರೋಬ್ಬರಿ 25 ವರ್ಷಗಳ ಬಳಿಕ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಕಾರು ಕಳವು ಆರೋಪಿಯನ್ನು ಪಿರಿಯಾಪಟ್ಟಣದ ಆರನೆಹಳ್ಳಿಯಲ್ಲಿ ಬಂಧಿಸಿದ್ದಾರೆ‌.

ಪಿರಿಯಾಪಟ್ಟಣದ ಆರನೆಹಳ್ಳಿ ನಿವಾಸಿ ಅಸ್ಲಾಂ ಪಾಷಾ ಬಂಧಿತ ಆರೋಪಿ.

1997ರ ನವೆಂಬರ್ 11ರಂದು ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಬಾಸಿಡರ್ ಕಾರೊಂದನ್ನು ಆರೋಪಿ ಅಸ್ಲಾಂ ಪಾಷಾ ಕಳವು ಮಾಡಿದ್ದನು. ಆ ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧನ ಮಾಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆದರೆ ಆರೋಪಿ 2000ರ ಫೆಬ್ರವರಿ 8ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ಗೈರು ಹಾಜರಾಗಿದ್ದ. ಅಲ್ಲದೆ 2015ರ ಮೇ 7ರಿಂದ ಈ ಪ್ರಕರಣ ಎಲ್ ಪಿಸಿ ಆಗಿತ್ತು. ಈ ಬಗ್ಗೆ ಪೊಲೀಸರು ಆರೋಪಿಯನ್ನು ಹುಡುಕಾಟ ನಡೆಸುತ್ತಿದ್ದರು.

ಆದರೆ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಸೆಪ್ಟೆಂಬರ್ 12ರಂದು 25 ವರ್ಷದ ಬಳಿಕ ಪೊಲೀಸರು ಈತನನ್ನು ಪಿರಿಯಾಪಟ್ಟಣದ ಆರನೆಹಳ್ಳಿಯಲ್ಲಿ ಬಂಧಿಸಿದ್ದಾರೆ‌. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article