
ಮನೆಯಲ್ಲಿ ನಾಯಿ ಸಾಕುವುದರಿಂದ ದೂರವಾಗುತ್ತೆ ನಿಮ್ಮ ಈ 3 ಗ್ರಹ ದೋಷ..!!!
Thursday, September 1, 2022
ಶನಿ ಮತ್ತು ರಾಹು, ಕೇತುಗಳನ್ನು ಶಾಂತಗೊಳಿಸಲು ಮನೆಯಲ್ಲಿ ಕಪ್ಪು ಬಣ್ಣದ ನಾಯಿ ಸಾಕುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಕಪ್ಪು ನಾಯಿ ಸಾಕುವುದು ಶನಿ ಮತ್ತು ರಾಹು, ಕೇತುಗಳನ್ನು ಶಾಂತಗೊಳಿಸಬಹುದು ಮತ್ತು ಉತ್ತಮ ಫಲಿತಾಂಶಗಳನ್ನು
ಪಡೆಯಬಹುದು.
ಕೆಲವರಿಗೆ ನಾಯಿಯನ್ನು ಸಾಕಲು ಸಾಧ್ಯವಾಗುವುದಿಲ್ಲ. ಅಂತಹವರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಾಯಿಯನ್ನು ಸಾಕಲು ಶಕ್ತಿ ಇಲ್ಲದಿದ್ದರೆ ಹಸಿದ ನಾಯಿಗೆ, ಬೀದಿ ನಾಯಿಗೆ ಆಹಾರ ತಿನ್ನಿಸಿ. ಹಸಿದ ನಾಯಿಗಳಿಗೆ ಆಹಾರ ನೀಡಿ ಉಪಚರಿಸುವುದರಿಂದ ಶನಿದೇವನು ಸಂತುಷ್ಟನಾಗುತ್ತಾನೆ. ವಿಶೇಷವಾಗಿ ನಿಮ್ಮ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ ಅಥವಾ ನಿಮ್ಮ ಜಾತಕದಲ್ಲಿ ಸಾಡೇ ಸಾತಿ ಶನಿ ನಡೆಯುತ್ತಿರುವವರು ನಾಯಿಗೆ ಆಹಾರ ನೀಡುವುದರಿಂದ ಪರಿಹಾರವನ್ನು ಪಡೆಯಬಹುದು.
ನಾಯಿಯ ಸೇವೆ ಮಾಡುವುದರಿಂದ ಶನಿಯಿಂದ ಉಂಟಾಗುವ ತೊಂದರೆಗಳಿಂದ ಪರಿಹಾರ ಪಡೆಯುವುದು ಮಾತ್ರವಲ್ಲದೆ, ಕಾಲಭೈರವನೂ ಸಂತುಷ್ಟನಾಗುತ್ತಾನೆ. ಕಾಲಭೈರವನ ಕೃಪೆಯು ದೊಡ್ಡ ಬಿಕ್ಕಟ್ಟನ್ನು ತಪ್ಪಿಸುತ್ತದೆ.ಕಪ್ಪು ನಾಯಿಯು ಮನೆಯ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ.