-->
ಉಜಿರೆಯಲ್ಲಿ ಸೆ.30 ಕ್ಕೆ ಹೋಟೆಲ್ ಓಷಿಯನ್ ಪರ್ಲ್  (OCEAN PEARL) ಆರಂಭ

ಉಜಿರೆಯಲ್ಲಿ ಸೆ.30 ಕ್ಕೆ ಹೋಟೆಲ್ ಓಷಿಯನ್ ಪರ್ಲ್ (OCEAN PEARL) ಆರಂಭ


   ಅತಿಥಿ ಸೇವೆಗೆ ಮತ್ತು ಉತ್ತಮ  ಗುಣ ಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾದ ಹೋಟೆಲ್  ಓಷಿಯನ್ ಪರ್ಲ್ (THE OCEAN PEARL), ಉಜಿರೆ 30 ಸೆಪ್ಟೆಂಬರ್ 2022 ರಂದು ತನ್ನ 4ಶಾಖೆಯನ್ನು ತೆರೆಯಲಿದೆ ಎಂದು ಬರೋಡ ಶಶಿ ಕ್ಯಾಟರರ್ಸ್ ಸಿಎಂಡಿ, ಮಾಲಕ ಶಶಿಧರ್ ಶೆಟ್ಟಿ (Shashidhar Shetty.Shashi Caterers.Baroda,CMD,and Owener of the Property)  ಹೇಳಿದರು.


ಉಜಿರೆಯಲ್ಲಿ ಮಾತನಾಡಿದ ಅವರ ಓಷಿಯನ್ ಪರ್ಲ್ ಹೋಟೆಲ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮೂರು ಶಾಖೆಗಳನ್ನು ಹೊಂದಿದ್ದು, ಅವುಗಳೆಂದರೆ ದಿ ಓಷಿಯನ್ ಪರ್ಲ್, ಮಂಗಳೂರು, ದಿ ಓಷಿಯನ್ ಪರ್ಲ್, ಉಡುಪಿ ಮತ್ತು ದಿ ಓಷಿಯನ್ ಪರ್ಲ್ ಇನ್, ಮಂಗಳೂರು ತಮ್ಮ 4 ನೇ   ಶಾಖೆಯನ್ನು ಆರಂಭಿಸಲು ಹೆಮ್ಮೆಪಡುತ್ತಿದೆ.  ಸೆಪ್ಟೆಂಬರ್ 30 ರಂದು ಉಜಿರೆಯಲ್ಲಿ ತಮ್ಮ ಹೊಸ ಹೋಟೆಲ್ ಉದ್ಘಾಟನೆಯೊಂದಿಗೆ ತನ್ನ  ಐಷಾರಾಮಿ ಹೋಟೆಲ್‌ಗಳ ನಿರ್ವಹಣೆಗೆ ಹೊಸ ಮುಕುಟವನ್ನು ಸೇರ್ಪಡೆ ಗೊಳಿಸಿದಂತಾಗಿದೆ ಎಂದರು.

ಓಷಿಯನ್ ಪರ್ಲ್ ವ್ಯವಹಾರ ಸಂಸ್ಥೆ, ಹೋಟೆಲ್ ಗಳ ರೆಸ್ಟೋರೆಂಟ್ ವ್ಯವಹಾರಕ್ಕೆ ಮುನ್ನುಗುವ ಮೂಲಕ ಔಟ್ ಡೋರ್ ಕ್ಯಾಟರಿಂಗ್ ಸೇವೆಗಳು

 ಔತಣಕೂಟ, ಕ್ಯಾಂಟೀನ್ ಗಳ ನಿರ್ವಹಣೆ  ನಡೆಸುತ್ತಿದ್ದು, ಈ  ಸಂಸ್ಥೆ
ಹಾಸ್ಪಿಟಾಲಿಟಿ ಉದ್ಯಮದ ದಿಗ್ಗಜ ಶ್ರೀ ಜಯರಾಮ್ ಬನಾನ್ ಅವರಿಗೆ ಸೇರಿರುವ  ಪ್ರತಿಷ್ಠಿತ JRB ಗ್ರೂಪ್‌ಗೆ ಸೇರಿದೆ.

 ಗ್ರೂಪ್‌ ಸಾಗರ್ ರತ್ನ ಬ್ರಾಂಡ್‌, ಸಸ್ಯಾಹಾರಿ ರೆಸ್ಟೋರೆಂಟ್‌ಗಳ ಸರಪಳಿಯ ಮೂಲಕ 150 ಕ್ಕೂ ಹೆಚ್ಚು ಶಾಖೆಗಳನ್ನು ಹೆಚ್ಚಾಗಿ ದೇಶದ ಉತ್ತರ ರಾಜ್ಯಗಳಾದ್ಯಂತ ಹೊಂದಿದ್ದು, ದೆಹಲಿಯ NCT ಪ್ರದೇಶ ಸಹಿತ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವವನ್ನು ಹೊಂದಿರುವುದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಮತ್ತು ಅತಿದೊಡ್ಡ ಸರಪಳಿ ಎಂದು ಪರಿಗಣಿಸಲ್ಪಟ್ಟಿದೆ. 
 
 ಓಶಿಯನ್ ಪರ್ಲ್  ಹುಬ್ಬಳ್ಳಿಯಲ್ಲಿ ದಿ ಓಷಿಯನ್ ರೆಸಾರ್ಟ್ ಮತ್ತು ಸ್ಪಾ ಜೊತೆಗೆ, ಮಂಗಳೂರು ನಗರದ ಪ್ರತಿಷ್ಠಿತ TMA ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ಕೂಡ  ನಿರ್ವಹಣೆ ನಡೆಸುತ್ತಿದೆ. 
ರಾಷ್ಟ್ರ ರಾಜಧಾನಿಯ ದೆಹಲಿಯಲ್ಲಿ ಚತ್ತರ್‌ಪುರ ಮಂದಿರ ರಸ್ತೆಯಲ್ಲಿರುವ ದಿ ಓಷಿಯನ್ ರಿಟ್ರೀಟ್ ಮತ್ತು ಓಷಿಯನ್ ಪರ್ಲ್ ಗಾರ್ಡೆನಿಯಾ  ಎಂಬ ಬ್ರಾಂಡ್ ಹೆಸರಿನಡಿಯಲ್ಲಿ ಅತ್ಯುತ್ತಮ ಗುಣಮಟ್ಟದ ಔತಣ ಕೂಟದ ಸೇವೆಗೆ ಹೆಸರುವಾಸಿಯಾಗಿದೆ. 

ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ   ಧರ್ಮಸ್ಥಳದ ಬಳಿ ಇರುವ. ಉಜಿರೆಯ ಪಟ್ಟಣದ ಲಲಿತಾ ನಗರದ ಬಳಿ  ಇದೀಗ ಓಷಿಯನ್ ಪರ್ಲ್, ಸಂಸ್ಥೆ ತನ್ನ ಮುಕುಟಕ್ಕೆ ಇನ್ನೊಂದು ವಜ್ರ ಎಂಬಂತೆ ತನ್ನ ನೂತನ  ಹೋಟೆಲನ್ನು ತೆರೆಯಲಿದೆ .(ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಬಳಿ) ಇದು  3 ಮಹಡಿಗಳ  ಐಷಾರಾಮಿ ಹೋಟೆಲ್ ಆಗಿದ್ದು 34 ಕೊಠಡಿಗಳನ್ನು ಹೊಂದಿದೆ.ಇಲ್ಲಿ 34  ರೂಮ್ಗಳಿದ್ದು 31ಸೂಟು ರೂಮ್ ಗಳು, 2 ಸೂಟ್ ರೂಮ್ ಗಳು ಮತ್ತು 1ಪ್ರೆಸಿಡೆಂಟ್  ಸೂಟ್ ರೂಮ್ ಅನ್ನು ಹೊಂದಿದೆ ಎಂದರು.

ಇಲ್ಲಿ ದೊರೆಯುವ  ಸೇವೆಗಳು.
 
ಪೆಸಿಫಿಕ್- ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್.

 ಸಾಗರ ರತ್ನ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್ ;140 ಮಂದಿಯ  ಆಸನ ವ್ಯವಸ್ತೆಯ  ಸಾಮರ್ಥ್ಯ ಹೊಂದಿದ್ದು ,50 ಮಂದಿ ಕುಳಿತುಕೊಂಡು ತಿನ್ನುವ  ಮಾಂಸಾಹಾರಿ ರೆಸ್ಟೋರೆಂಟ್ ಅನ್ನು ಹೊಂದಿದೆ.



ಜಿಮ್
 ಓಶಿಯನ್ ಪರ್ಲ್ ಜಿಮ್.ದೇಹ ದಾರ್ಡ್ಯತೆಯ  ಉತ್ಸಾಹಿ ಜನರ  ಗುಣಮಟ್ಟದ ಜೀವನಕ್ಕೆ, ತಮ್ಮ  ಅಗತ್ಯಗಳನ್ನು ಪೂರೈಸಲೂ ಇಲ್ಲಿ ಅವಕಾಶವಿದೆ. 
ಓಶಿಯನ್ ಪರ್ಲ್  ಉಜಿರೆ ಹೋಟೆಲ್  
ಬೆಳ್ತಂಗಡಿ ಮೂಲದ ಶ್ರೀ ಶಶಿಧರ್ ಶೆಟ್ಟಿಯವರ ಒಡೆತನದಲ್ಲಿದೆ. ಮೂರು ದಶಕಗಳಿಗೂ ಮೀರಿದ ಅನುಭವ ಮತ್ತು ಪರಿಣತಿಯೊಂದಿಗೆ ಆಹಾರ ಸೇವೆಯ (ಕ್ಯಾಟರಿಂಗ್) ಉದ್ಯಮದಲ್ಲಿ ಮಾನ್ಯತೆ ಪಡೆದ ಪ್ರಭಾವಿ ಉದ್ಯಮಿಯಾಗಿದ್ದಾರೆ.  ಅವರು ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಮತ್ತು ಅಧ್ಯಕ್ಷರಾಗಿದ್ದಾರೆ.ಜೊತೆಗೆ  ದೇಶದ ಸುಮಾರು  12 ರಾಜ್ಯಗಳಲ್ಲಿ ಹರಡಿರುವ ಪ್ರಸಿದ್ಧ ಕೈಗಾರಿಕಾ ಸಮೂಹಗಳ ಸಂಸ್ಥೆಗಳ  ಕ್ಯಾಂಟೀನ್‌ಗಳನ್ನು ನಡೆಸುತ್ತಿದ್ದಾರೆ. ಎಸಿಗಬ ಓಶಿಯನ್ ಪರ್ಲ್ ಹೋಟೆಲ್ ಉಜಿರೆಯು ಹಾಸ್ಪಿಟಾಲಿಟಿ ಸಂಸ್ಥೆಯು ಹೋಟೆಲ್  ಇಂಡಸ್ಟ್ರಿಯಲ್ಲಿ ಇರುವ ಎರಡು  ಜಂಟಿ ದಿಗ್ಗಜರ  ಉದ್ಯಮವಾಗಿದೆ. ಅಂದರೆ ಶ್ರೀ ಜಯರಾಮ್ ಬನಾನ್ ಮತ್ತು ಶ್ರೀ ಶಶಿಧರ್ ಶೆಟ್ಟಿ 75 ವರ್ಷಗಳ  ಸಂಯೋಜಿತ ಅನುಭವದ ಫಲ ದೊಂದಿಗೆ   ಓಶಿಯನ್ ಪರ್ಲ್, ಉಜಿರೆ ಯಲ್ಲಿ ಶುಭಾರಂಭ ಗೊಳ್ಳಲಿದೆ. 

ಶ್ರೀ ಶಶಿಧರ ಶೆಟ್ಟಿಯವರ ಮಾತೃಶ್ರಿ ಯಾವರಾದ  ಶ್ರೀಮತಿ ಕಾಶಿ ಶೆಟ್ಟಿ ಯವರು, 30, ಶುಕ್ರವಾರ ಸೆಪ್ಟೆಂಬರ್ 2022 ರಂದು ಉದ್ಘಾಟಿಸಲಿದ್ದಾರೆ.  
  ಪ್ರಸಿದ್ಧ  ಧರ್ಮಸ್ಥಳ ಮಂಜುನಾಥನ  ದೇವಸ್ಥಾನ ಭೇಟಿ ನೀಡುವವರಿಗೆ, ಉಜಿರೆಯಲ್ಲಿರುವ  ಸಾಗರದ ಮುತ್ತು   ಓಶಿಯನ್ ಪರ್ಲ್ ಹೊಸ ಭಾಷ್ಯವಾಗುವ ನಿರೀಕ್ಷೆಯಿದೆ.  ಅಲ್ಲದೆ  ಇದು JRB ಗ್ರೂಪ್‌ನ  ನಿಷ್ಠಾವಂತ ಗ್ರಾಹಕರಿಗೆ ಮತ್ತು ತಮ್ಮ ಉತ್ತಮ  ನಿರ್ವಹಣೆಯ ಆಶಯಗಳಿಗೆ ಇದು  ನಮ್ಮ ವಿನಮ್ರ ಕೊಡುಗೆಯಾಗಿದೆ. ಜೊತೆಗೆ ಸದಾ  ರಾಜ್ಯದ ಪ್ರಜ್ಞಾವಂತ  ಜನರ ನಿರಂತರ ಪ್ರೀತಿ ಮತ್ತು ವಾತ್ಸಲ್ಯವನ್ನು  ನಿರೀಕ್ಷಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಓಷಿಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಗಿರೀಶ್ ಎನ್, (Girish N. Vicepresident Oceanpearl Hotel Ltd.) ಪ್ರಾಜೆಕ್ಟ್ ಜಿಎಂ ಶಿವಕುಮಾರ್ (Shivakumar Project G.M), ಓಷಿಯನ್ ಪರ್ಲ್ ಉಜಿರೆಯ ಜಿಎಂ ನಿತ್ಯಾನಂದ ಮೊಂಡಾಲ್ (Nithyanada Mondal.G.M. oceanpearl Ujire Dharmasthala)  ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article