
ಕಾಸರಗೋಡು: ಬೀದಿ ನಾಯಿ ಉಪಟಳಕ್ಕೆ ಏರ್ ಗನ್ ಹಿಡಿದು ಮದ್ರಾಸಾದ ವಿದ್ಯಾರ್ಥಿಗಳಿಗೆ ರಕ್ಷಣೆ ...!
Sunday, September 18, 2022
ಕಾಸರಗೋಡು: ಬೀದಿ ನಾಯಿ ಉಪಟಳವನ್ನು ಸಹಿಸದೆ ಮದ್ರಸಾಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ವ್ಯಕ್ತಿಯೋರ್ವರು ಏರ್ ಗನ್ ಹಿಡಿದು ರಕ್ಷಣೆ ನೀಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಬೇಕಲದ ಹಾದಾದ್ ನಗರದಲ್ಲಿ ನಡೆದಿದೆ. ಇದೀಗ ಆತನ ಮೇಲೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀರ್ ಎಂಬವರು ಸಾರ್ವಜನಿಕವಾಗಿ ಏರ್ ಗನ್ ಹಿಡಿದು ಸಂಚರಿಸಿದವರು. ಇತ್ತೀಚೆಗೆ ಕೇರಳದಲ್ಲಿ ಬೀದಿ ನಾಯಿಗಳ ಉಪಟಳ ಅಧಿಕವಾಗಿದ್ದು, ಮದರಸಾಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬೀದಿನಾಯಿಗಳು ದಾಳಿ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ತಿರುವನಂತಪುರಂ ತನಕ ನೂರಾರು ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬೇಕಲದ ಹದಾದ್ ನಗರದ ಮದ್ರಸಾಗೆ ತೆರಳುವ 13 ಮಕ್ಕಳಿಗೆ ಸ್ಥಳೀಯ ನಿವಾಸಿ ಜಮೀರ್ ಎಂಬಾತ ಏರ್ ಗನ್ ಹಿಡಿದು ರಕ್ಷಣೆ ನೀಡುತ್ತಿದ್ದರು.
ಜಮೀರ್ ಏರ್ ಗನ್ ಹಿಡಿದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಯಿ ಮಕ್ಕಳ ಮೇಲೆ ದಾಳಿ ಮಾಡಿದರೆ ಶೂಟ್ ಮಾಡಲಾಗುವುದು ಎಂದು ಅವರು ಹೇಳುವುದೂ ದಾಖಲಾಗಿದೆ. ಅಲ್ಲದೆ ಅವರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಆದರೆ ಜಮೀರ್, ಏರ್ ಗನ್ ನಿಂದ ಶೂಟ್ ಮಾಡಿ ನಾಯಿಯನ್ನು ಕೊಲ್ಲಲು ಸಾಧ್ಯವಿಲ್ಲ. ತಾನು ಯಾವುದೇ ನಾಯಿಗಳಿಗೆ ಗನ್ ನಿಂದ ಶೂಟ್ ಮಾಡಿಲ್ಲ. ಮಕ್ಕಳ ರಕ್ಷಣೆಗಾಗಿ ಮಾತ್ರ ಏರ್ ಗನ್ ಹಿಡಿದಿದ್ದೇನೆ ಎಂದು ಹೇಳಿದ್ದಾರೆ.