![ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ವಿವಾಹವಾಗಬೇಕೆಂದು ನರ್ಸಿಂಗ್ ವಿದ್ಯಾರ್ಥಿನಿಗೆ ಬೆದರಿಕೆ: ಕಿಡಿಗೇಡಿ ಅರೆಸ್ಟ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ವಿವಾಹವಾಗಬೇಕೆಂದು ನರ್ಸಿಂಗ್ ವಿದ್ಯಾರ್ಥಿನಿಗೆ ಬೆದರಿಕೆ: ಕಿಡಿಗೇಡಿ ಅರೆಸ್ಟ್](https://blogger.googleusercontent.com/img/b/R29vZ2xl/AVvXsEhmsKln3IhE597Sn-yUdK4NAldGsp1lC3PYgoHPkT1g7Zl2u9DZYmv0u8p0F_xQP62zbMonw-98SZRlormdxTTNhrvEZorGRGuV_7EnetteWUoQFogxFjtDZ4OJ6QyQyGJZ7caKjsyFkZZg/s1600/1662607032259977-0.png)
ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ವಿವಾಹವಾಗಬೇಕೆಂದು ನರ್ಸಿಂಗ್ ವಿದ್ಯಾರ್ಥಿನಿಗೆ ಬೆದರಿಕೆ: ಕಿಡಿಗೇಡಿ ಅರೆಸ್ಟ್
Thursday, September 8, 2022
ಭೋಪಾಲ್: ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ತನ್ನನ್ನು ವಿವಾಹವಾಗಬೇಕು. ಇಲ್ಲದಿದ್ದಲ್ಲಿ ಕೊಲೆ ಮಾಡುವುದಾಗಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಬೆದರಿಕೆಯೊಡ್ಡಿರುವ ಮುಸ್ಲಿಂ ಯುವಕನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಖಾಂಡ್ವಾ ಜಿಲ್ಲೆಯ ನಿವಾಸಿ ಮನು ಮನ್ಸೂರಿ (22) ಎಂಬಾತನೇ ಈ ಕಿಡಿಗೇಡಿ ಬಂಧಿತ ಆರೋಪಿ.
ಸೋಮವಾರ ಈ ನರ್ಸಿಂಗ್ ವಿದ್ಯಾರ್ಥಿನಿಯ ಮುಂದೆ ದಿಢೀರ್ ಪ್ರತ್ಯಕ್ಷವಾದ ಕಿಡಿಗೇಡಿ ಮನು ಮನ್ಸೂರಿ, ಹೂವುಗಳನ್ನು ತೋರಿಸಿ, ಮದುವೆ ಆಗುವಂತೆ ದುಂಬಾಲು ಬಿದ್ದಿದ್ದಾನೆ. ಸಂತ್ರಸ್ತ ವಿದ್ಯಾರ್ಥಿನಿ ಹಾಗೂ ಮನು ಮನ್ಸೂರಿ ಒಂದೇ ಗ್ರಾಮದ ನಿವಾಸಿಗಳು. ಆರೋಪಿ ಯಾವುದೋ ರೀತಿ ತನ್ನ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಾನೆ. ಬಳಿಕ ವಾಟ್ಸ್ಆ್ಯಪ್ ಮೂಲಕ ತನಗೆ ಕಿರುಕುಳ ನೀಡುತ್ತಿದ್ದನು. ಮದುವೆ ಮಾಡಿಕೊಳ್ಳಲು ನಿರಾಕರಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ನಮ್ಮ ಗ್ರಾಮದಿಂದ ಕಾಲೇಜಿನವರೆಗೂ ಪ್ರತಿದಿನ ತನ್ನನ್ನು ಆತ ಹಿಂಬಾಲಿಸುತ್ತಾನೆ. ಒಮ್ಮೆ ನನ್ನ ಕೈ ಹಿಡಿದುಕೊಂಡ ಆಗ ನಾನು ಜೋರಾಗಿ ಕೂಗಿಕೊಂಡೆ. ಆಗ ಆತ ಓಡಿ ಹೋಗುವ ಮುನ್ನ ನನ್ನ ಮೇಲೆ ಹೂಗಳನ್ನು ಚೆಲ್ಲಿ , ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ನನ್ನನ್ನು ಮದುವೆ ಆಗದಿದ್ದರೆ, ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಗನ್ ಹಿಡಿದು ತೆಗೆಸಿಕೊಂಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ನನಗೆ ಕಳುಹಿಸಿದ ಎಂದು ಸಂತ್ರಸ್ತೆ ಹೇಳಿದ್ದಾಳೆ.
ಹಿಂದೂ ಸಂಘಟನೆಯೊಂದರ ಸಹಾಯ ಪಡೆದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿ ಮನ್ಸೂರಿಯನ್ನು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪ ಸಾಬೀತಾದಲ್ಲಿ ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಈ ವರ್ಷದ ಜನವರಿಯಲ್ಲಿ ಮನು ಮನ್ಸೂರಿ, ಮತ್ತೊಬ್ಬ ಮಹಿಳೆಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು ಎಂದು ಹೇಳಿದ್ದಾರೆ.