
ಮತ್ತೊಬ್ಬಾಕೆಯೊಂದಿಗೆ ಲಾಡ್ಜ್ ನಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿಗೆ ಪತ್ನಿಯಿಂದ ಹಿಗ್ಗಾಮುಗ್ಗಾ ಥಳಿತ
Friday, September 23, 2022
ನವದೆಹಲಿ: ಲಾಡ್ಜ್ ನಲ್ಲಿ ಮತ್ತೊಬ್ಬಾಕೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿರುವ ಪತಿಯ ವಿರುದ್ಧ ತಿರುಗಿ ಬಿದ್ದ ಪತ್ನಿ ಪಾದರಕ್ಷೆಯಿಂದ ಆತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಗ್ರಾದ ದೆಹಲಿ ಗೇಟ್ ಸಮೀಪ ನಡೆದಿರುವುದಾಗಿ ತಿಳಿದು ಬಂದಿದೆ.
ತನ್ನ ತಂದೆಗೆ ತಾಯಿಯೇ ಚಪ್ಪಲಿಯಿಂದ ಥಳಿಸುತ್ತಿರುವ ದೃಶ್ಯವನ್ನು ಆತನ ಪುತ್ರಿಯೇ ಸೆರೆಹಿಡಿದಿದ್ದಾಳೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ. ಪತ್ನಿಯನ್ನು ನೀಲಂ ಎಂದು ಗುರುತಿಸಲಾಗಿದ್ದು, ಪತಿ ದಿನೇಶ್ ಗೋಪಾಲ್ ಎಂಬುದಾಗಿ ತಿಳಿದು ಬಂದಿದೆ.
ತನ್ನ ಪತಿ ಯಾವಾಗಲೂ ಇದೇ ರೀತಿ ವರ್ತಿಸುತ್ತಿರುವುದಾಗಿ ನೀಲಂ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ. ನಮಗೆ 16 ವರ್ಷದ ಪುತ್ರಿ ಮತ್ತು ಒಂಬತ್ತು ವರ್ಷದ ಪುತ್ರನಿದ್ದಾನೆ. ಆದರೂ ಈತನ ಕೆಟ್ಟ ಚಾಳಿ ಬಿಟ್ಟಿಲ್ಲ. ಇದೀಗ ಮಕ್ಕಳಿಗೂ ಕೂಡಾ ತಂದೆಯ ಕೆಟ್ಟ ಚಾಳಿ ಬಗ್ಗೆ ತಿಳಿದಿದೆ ಎಂದು ದೂರಿದ್ದಾರೆ.