
BIGGBOSS ಮನೆಗೆ ಗುಟ್ಟಾಗಿ ಸಪ್ಲೈ ಆಗುತ್ತಿದೆ ಆ ಒಂದು ವಸ್ತು..? ಸೀಕ್ರೆಟ್ ರಿವಿಲ್ ಮಾಡಿದ ಸೋನು..?
Thursday, September 1, 2022
ಸ್ಪರ್ಧಿಗಳಿಗೆ ಹೊರಗಿಂದ ಆ ಒಂದು ವಸ್ತು ಪೂರೈಕೆ ಆಗುತ್ತಿರುವ ಬಗ್ಗೆ ಸೋನು ಶ್ರೀನಿವಾಸ್ ಗೌಡ ಆರೋಪ ಮಾಡಿದ್ದಾರೆ. ಬಿಗ್ ಬಾಬಾಸ್ನಲ್ಲಿ ಯಾವ ತಿನ್ನುವ ವಸ್ತುಗಳನ್ನು ಹೊರಗಿನಿಂದ ತರುವಂತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸಿಗುವುದನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಆದರೆ, ಬಿಗ್ ಬಾಸ್ನಲ್ಲಿ ಪುರುಷ ಸ್ಪರ್ಧಿಗಳಿಗೆ ಹೊರಗಿನಿಂದ ಪ್ರೋಟಿನ್ ಪೌಡರ್ ತರೋಕೆ ಅವಕಾಶ ಇದೆ ಎಂಬುದನ್ನು ಸೋನು ಗೌಡ ರಿವೀಲ್ ಮಾಡಿದ್ದಾರೆ.
ಈಗ ಅವರು ನೀಡಿದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
‘ಅಮ್ಮ ನನಗೆ ಮನೆಯಿಂದ ಹಾರ್ಲಿಕ್ಸ್ ಪೌಡರ್ ಕಳುಹಿಸಿ’ ಎಂದಿದ್ದಾರೆ ಸೋನು. ಇದಕ್ಕೆ ಅವಕಾಶ ಇಲ್ಲ ಎಂಬ ಮಾತನ್ನು ಮನೆ ಮಂದಿ ಹೇಳಿದರು. ‘ಮನೆಯಿಂದ ಯಾವ ವಸ್ತುಗಳನ್ನು ಪಡೆದುಕೊಳ್ಳುವಂತಿಲ್ಲ. ಎಲ್ಲರಿಗೂ ಇದು ಅಪ್ಲೈ ಆಗುತ್ತದೆ’ ಎಂದರು. ಇದಕ್ಕೆ ಸೋನು ಶ್ರೀನಿವಾಸ್ ಗೌಡ ಅಸಲಿ ವಿಚಾರ ತೆರೆದಿಟ್ಟರು. ‘ಹುಡುಗರಿಗೆ ಪ್ರೋಟಿನ್ ಪೌಡರ್ ಕಳಿಸ್ತಾರೆ. ಆದರೆ, ನಮಗೆ ಯಾಕೆ ಹಾರ್ಲಿಕ್ಸ್ ತರೋಕೆ ಏಕೆ ಅವಕಾಶ ಇಲ್ಲ. ಇದು ಮೋಸ’ ಎಂದು ಬೇಸರ ಹೊರಹಾಕಿದ್ದಾರೆ.