
ಬಂಟ್ವಾಳ: ಹೆಜ್ಜೇನು ದಾಳಿಗೆ ಬಾಲಕ ಬಲಿ
Friday, September 2, 2022
ಬಂಟ್ವಾಳ: ಹೆಜ್ಜೇನು ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಳಾಯಿಯಲ್ಲಿ ನಡೆದಿದೆ.
ಕಳಾಯಿ ತಾಳಿಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮಾಝಿನ್ (12) ಮೃತಪಟ್ಟ ದುರ್ದೈವಿ ಬಾಲಕ.
ಗುರುವಾರ ಸಂಜೆ ಮನೆಯ ಬಳಿಯಲ್ಲಿಯೇ ಆಟವಾಡುತ್ತಿದ್ದ ಮಾಝಿನ್ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ತೀವ್ರವಾಗಿ ಅಸ್ವಸ್ಥನಾಗಿದ್ದ ಬಾಲಕನನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.