
ಮೈಸೂರು: ಪ್ರತಿಷ್ಠಿತ ಹೋಟೆಲ್ ನಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವು; ಜೊತೆಗಿದ್ದ ಯುವಕ ನಾಪತ್ತೆ...!
Friday, September 2, 2022
ಮೈಸೂರು: ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್ ಒಂದರಲ್ಲಿ ಯುವತಿಯೋರ್ವಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಈಕೆಯ ಹೆಸರು ಅಪೂರ್ವ ಶೆಟ್ಟಿ ಎಂದು ತಿಳಿದು ಬಂದಿದೆ .
ಕಳೆದ ಎರಡು ದಿನಗಳ ಹಿಂದೆ ಅಪೂರ್ವ ಶೆಟ್ಟಿ ಯುವಕನೋರ್ವನೊಂದಿಗೆ ಬಂದು ಕೊಠಡಿ ಪಡೆದು ತಂಗಿದ್ದರು. ನಿನ್ನೆ ಕೊಠಡಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಬಾಯಲ್ಲಿ ನೊರೆ ಬರುತ್ತಿದ್ದು, ಯುವಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅಪೂರ್ವ ಶೆಟ್ಟಿಯವರ ಸಾವು ಸಹಜವೋ, ಕೊಲೆಯೋ ಎಂಬುದು ತನಿಖೆ ನಂತರ ತಿಳಿದು ಬರಲಿದೆ. ದೇವರಾಜ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಪಟ್ಟ ಯುವತಿ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.