ಬೆಂಗಳೂರು: ಮ್ಯಾನ್ ಹೋಲ್ ಗೆ ಬಿದ್ದು ಯುವತಿ ಸಾವು
Sunday, September 11, 2022
ಬೆಂಗಳೂರು: ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಯುವತಿ ಆಯತಪ್ಪಿ ಮ್ಯಾನ್ ಹೋಲ್ ಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಎಚ್ ಬಿಆರ್ ಲೇಔಟ್ ನ ಅಶ್ವತ್ಥನಗರದಲ್ಲಿ ನಡೆದಿದೆ.
ತಾರಾ ಬಡಾಯಿಕ್ (23) ಮೃತಪಟ್ಟ ದುರ್ದೈವಿ ಯುವತಿ.
ತಾರಾ ಬಡಾಯಿಕ್ ಎಂಬ ಈ ಯುವತಿ ತಡರಾತ್ರಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದರು. ಆದರೆ ಗಮನಿಸದೆ ಅವರು ತೆರೆದ ಮ್ಯಾನ್ ಹೋಲ್ ಒಳಗೆ ಬಿದ್ದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.