ಕೊಚ್ಚಿ: ವಿಮಾನ ಯಾನದಲ್ಲಿದ್ದಾಗಲೇ ಮಹಿಳೆ ಸಾವು
Monday, September 12, 2022
ಕೊಚ್ಚಿ: ವಿಮಾನ ಯಾನದಲ್ಲಿದ್ದಾಗಲೇ ಮಹಿಳೆಯೊಬ್ಬರು ಪ್ರಜ್ಞಾಹೀನ ಸ್ಥಿತಿಗೆ ತಲುಪಿ ಮೃತಪಟ್ಟಿರುವ ಘಟನೆ ರವಿವಾರ ಕೊಚ್ಚಿಯಲ್ಲಿ ನಡೆದಿದೆ.
ದುಬೈನಿಂದ ಕೊಚ್ಚಿಗೆ ಆಗಮಿಸಿರುವ ವಿಮಾನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳಾ ಯಾತ್ರಿಯೊಬ್ಬರು ಕೊಚ್ಚಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಿನಿ ( 56 ) ಎಂಬ ಮಹಿಳೆ ದುಬೈನಿಂದ ಕೊಚ್ಚಿಗೆ ಬರುತ್ತಿದ್ದರು. ಈ ವೇಳೆ ಅವರಯ ವಿಮಾನ ಯಾನದಲ್ಲಿದ್ದಾಗಲೇ ಪ್ರಜ್ಞಾಹೀನರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನದಿಂದ ಇಳಿದ ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ತಪಾಸಣೆ ಮಾಡಿರುವ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸಹಜ ಸಾವು ಪ್ರಕರಣವಾಗಿದ್ದರಿಂದ ಈ ಬಗ್ಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.