ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಮಾಡಬೇಕು: ಡಾ. ಸುಕನ್ಯಾ ಮೇರಿ
ಮೂಡುಬಿದಿರೆ: ಭಾರತ ವಿವಿಧ ಸಂಸ್ಕೃತಿ, ಭಾಷೆ, ಆಚರಣೆಗಳನ್ನು ಅನುಸರಿಸುವ ದೇಶ. ಆದರೆ ಉತ್ತಮ ಆಡಳಿತಕ್ಕಾಗಿ ಒಂದು ರಾಷ್ಟ್ರಭಾಷೆಯ ಅಗತ್ಯವಿದೆ ಎಂದು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಹಿಂದಿ ದಿವಸ್ ಆಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ದೇಶದಾದ್ಯಂತÀ ವಿವಿಧ ಪ್ರದೇಶಗಳ, ವಿವಿಧ ಭಾಷಿಕರು ಭಾಗವಹಿಸಿದ್ದರು. ಆದರೆ ಅವರೆಲ್ಲರೂ ಸಂವಹನಕ್ಕಾಗಿ ಹಿಂದಿ ಭಾಷೆಯನ್ನೇ ಅವಲಂಬಿಸಿದ್ದರು. ಅದರ ಪರಿಣಾಮವಾಗಿ ಇಂದು ಹಿಂದಿ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿದೆ. ಹಾಗಾಗಿ, ಅಧಿಕೃತವಾಗಿ ಭಾರತದಲ್ಲಿ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ನಾವು ಹೆಚ್ಚಿನ ಭಾಷೆಯನ್ನು ಕಲಿತಷ್ಟು ಉತ್ತಮ. ಹೊಸ ಭಾಷೆ ಕಲಿಯಲು ಅವಕಾಶ ಸಿಕ್ಕಾಗ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಹೆಚ್ಚು ಭಾಷೆ ಗೊತ್ತಿದ್ದಾಗ ಜಗತ್ತಿನ ಯಾವ ಮೂಲೆಯಲ್ಲೂ ಬದುಕಲು ಸಾಧ್ಯ ಎಂದರು.
ಹಿAದಿ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಬಿ.ಎ ವಿದ್ಯಾರ್ಥಿ ಯಶ್ ಶೆಟ್ಟಿ ಸ್ವಾಗತಿಸಿ, ಬಿಎಸ್ಸಿ ವಿದ್ಯಾರ್ಥಿನಿ ನಬಾ ವಂದಿಸಿದರು. ಬಿಬಿಎ ವಿದ್ಯಾರ್ಥಿ ಪೂರಬ್ ಕಾರ್ಯಕ್ರಮವನ್ನು ನಿರೂಪಿಸಿದರು.
ಬಾಕ್ಸ್ ಐಟಂ: ಹಿಂದಿ ದಿವಸದ ಪ್ರಯುಕ್ತ ನಡೆಸಲಾದ ಚರ್ಚಾ ಸ್ಪರ್ಧೆಯಲ್ಲಿ ಬಿಸಿಎ ವಿದ್ಯಾರ್ಥಿ ಶಿಶಿರ್ ಶೆಟ್ಟಿ, ಬಿಎಸ್ಸಿ ವಿದ್ಯಾರ್ಥಿನಿ ಅವಿನಾ ಶೆಟ್ಟಿ ಹಾಗೂ ಬಿಎಸ್ಸಿ ವಿದ್ಯಾರ್ಥಿ ಜೋನಾಧನ್ ಡಿಸೋಜಾ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗು ತೃತೀಯ ಬಹುಮಾನವನ್ನು ಪಡೆದರು.
,