ಸ್ಥಳೀಯಾಡಳಿತದ ವಿಶಿಷ್ಟ ಪ್ಯಾಕೇಜ್! : ಕೇವಲ 500 ರೂಪಾಯಿಗೆ ಜೈಲು ಅನುಭವ
ಸ್ಥಳೀಯಾಡಳಿತದ ವಿಶಿಷ್ಟ ಪ್ಯಾಕೇಜ್! : ಕೇವಲ 500 ರೂಪಾಯಿಗೆ ಜೈಲು ಅನುಭವ
ಸಾಂಕೇತಿಕ ಚಿತ್ರ
ಉತ್ತರಾಖಂಡ ಹಲ್‌ದ್ವಾನಿಯ ಆಡಳಿತ ಒಂದು ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ. ಒಂದು ರಾತ್ರಿಯ ಅವಧಿಗೆ 500 ರೂ. ಶುಲ್ಕ ಪಡೆದು ಪ್ರವಾಸಿಗರಿಗೆ ನೈಜ ಜೈಲುವಾಸದ ಅನುಭವ ನೀಡುವ ವಿಶಿಷ್ಟ ಪ್ಯಾಕೇಜ್ ಇದು..
ಪ್ರವಾಸಿಗರಿಗೆ ನೈಜ ಸೆರೆವಾಸದ ಅನುಭವ ಒದಗಿಸಲು ಹಳೆಯ ಜೈಲಿನ ಒಂದು ಭಾಗವನ್ನು ಹಲ್‌ದ್ವಾನಿ ಆಡಳಿತ ನವೀಕರಿಸುತ್ತಿದೆ.
ಪ್ರವಾಸಿಗರು ಮಾತ್ರವಲ್ಲ, ಬಂಧನ ಯೋಗದಿಂದ ತಪ್ಪಿಸಿಕೊಳ್ಳಲು ಸ್ವಲ್ಪ ಸಮಯ ಜೈಲಿನಲ್ಲಿ ಕಳೆಯಬೇಕು ಎಂದು ಜ್ಯೋತಿಷಿಗಳಿಂದ ಸಲಹೆ ಪಡೆದವರೂ ರೂ. 500 ಶುಲ್ಕ ಪಾವತಿಸಿ ಈ ನೈಜ ಜೈಲು ವಾಸದ ಅನುಭವವನ್ನು ಪಡೆಯಬಹುದಾಗಿದೆ.
ಅದಕ್ಕೆಂದೇ ಜೈಲಿನ ಪಾಳು ಬಿದ್ದ ಭಾಗವನ್ನು ನವೀಕರಿಸಿ ಜೈಲು ಅತಿಥಿಗಳನ್ನು ಸ್ವಾಗತಿಸಲು ಸಜ್ಜಾಗಿದೆ. ಈ ಪಾಳು ಬಿದ್ದ ಭಾಗವನ್ನು 1903ರಲ್ಲಿ ನಿರ್ಮಿಸಲಾಗಿತ್ತು.
ಶಿಫಾರಸ್ಸು ಮಾಡಲಾದ ವ್ಯಕ್ತಿಗಳು ಜೈಲಿನ ಬ್ಯಾರಕ್‌ಗಳಲ್ಲಿ ಕೆಲವು ಸಮಯ ಕಳೆಯಲು ಅವಕಾಶ ಕೊಡುವಂತೆ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಆದೇಶ ನೀಡುತ್ತಿರುತ್ತಾರೆ.
ಈ ಪ್ರವಾಸಿ ಖೈದಿಗಳಿಗೆ ಜೈಲು ಸಮವಸ್ತ್ರ ಮತ್ತು ಜೈಲಿನಲ್ಲೇ ಸಿದ್ಧಪಡಿಸಲಾದ ಊಟವನ್ನು ನೀಡಲಾಗುತ್ತದೆ ಎಂದು ಬಂಧೀಖಾತೆಯ ಉಪ ಜೈಲು ಸೂಪರಿಂಟೆಂಡೆಂಟ್ ಸತೀಶ್ ಸುಖಿಜಾ ಹೇಳುತ್ತಾರೆ.