
ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕಿನಲ್ಲಿ ನೇಮಕಾತಿ
ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕಿನಲ್ಲಿ ನೇಮಕಾತಿ
ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕಿನಲ್ಲಿ ಖಾಲಿ ಇರುವ ಸಹಾಯಕ ಮಹಾ ಪ್ರಬಂಧಕರು ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸಹಕಾರ ಸಂಘಗಳ ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ನೇಮಕಾತಿ ನಡೆಯುತ್ತಿದ್ದು, ಬ್ಯಾಂಕಿನಿಂದ ಅರ್ಜಿ ನಮೂನೆ ಪಡೆದು ಸಲ್ಲಿಸಬಹುದು.
ಹುದ್ದೆಯ ವಿವರ ಹೀಗಿದೆ.
ಸಂಸ್ಥೆ ಹೆಸರು: ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್
ಹುದ್ದೆ: ಸಹಾಯಕ ಮಹಾ ಪ್ರಬಂಧಕರು
ಶೈಕ್ಷಣಿಕ ಅರ್ಹತೆ: ಎಂ.ಕಾಂ ಯಾ ಎಂಬಿಎ ಪದವಿ ಜೊತೆಗೆ 10 ವರ್ಷಗಳ ತೃಪ್ತಿದಾಯಕ ಸೇವೆ ಹಾಗೂ 5 ವರ್ಷ ಶಾಖಾ ವ್ಯವಸ್ಥಾಪಕರಾಗಿ ದುಡಿದ ಅನುಭವ
ವೇತನ: 45300- 88300
ವಯೋಮಾನ: ಗರಿಷ್ಟ 35 ವರ್ಷ (ನಿಯಮಾನುಸಾರ ಸಡಿಲಿಕೆ ಇದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-09-2022
ಅರ್ಜಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಸಲ್ಲಿಸಬೇಕು..
ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್
ಮೊಳಹಳ್ಳಿ ಶಿವರಾಯ ವೃತ್ತದ ಬಳಿ
ಪುತ್ತೂರು, ದ.ಕ.- 574201