
Kadaba :-ಬಸ್ ಏರಿ ನಿಗದಿತ ಸ್ಥಳದಲ್ಲಿ ಇಳಿಯದೆ ನಾಪತ್ತೆಯಾದ ಶಾಲಾ ಬಾಲಕಿ. ಹಲವು ಗಂಟೆಗಳ ಬಳಿಕ ಪತ್ತೆ ಹಚ್ಚಿದ ಪೊಲೀಸರು.6ನೇ ತರಗತಿ ಬಾಲಕಿಯನ್ನು ಕಿಡ್ನಾಪ್ ಮಾಡಲಾಯಿತೇ..!!?
Sunday, September 4, 2022
ಕಡಬ
ಶಾಲೆಯಿಂದ ಹೊರಟು ಬಸ್ ಏರಿ ನಿಗದಿತ ಸ್ಥಳದಲ್ಲಿ ಇಳಿಯದೆ ಬಾಲಕಿಯೋರ್ವಳು ನಾಪತ್ತೆಯಾಗಿ ಹಲವು ಗಂಟೆಗಳ ಬಳಿಕ ಕೊಂಬಾರು ಎಂಬಲ್ಲಿ ಬಾಲಕಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಾಲಕಿಯನ್ನು ಅಪಹರಣ ಮಾಡಲಾಗಿದೆ ಎನ್ನಲಾಗಿದ್ದು, ವ್ಯಕ್ತಿಯೋರ್ವನನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಾಲೆಗೆ ಹೋಗಿ ಮನೆಗೆ ತೆರಳಲು ಬಸ್ ಏರಿದ 6ನೇ ತರಗತಿ ವಿದ್ಯಾರ್ಥಿನಿ ನಿರ್ದಿಷ್ಟ ಜಾಗದಲ್ಲಿ ಇಳಿಯದೆ ನಾಪತ್ತೆಯಾಗಿದ್ದು ಬಳಿಕ ಕೊಂಬಾರು ಸಮೀಪ ಪತ್ತೆಯಾದ ಘಟನೆ ನಿನ್ನೆ ಸಾಯಂಕಾಲ ನಡೆದಿದೆ. ಕಡಬ ತಾಲೂಕಿನ ಶಾಲೆಯೊಂದರ 6 ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಾಲೆ ಬಿಟ್ಟ ಬಳಿಕ ಮನೆಗೆ ಸರ್ಕಾರಿ ಬಸ್ಸ್ ಏರಿದ್ದಳು.ಆದರೆ ತನ್ನ ನಿಲುಗಡೆ ನಿಲ್ದಾಣ ಬಲ್ಯ ಹೊಸ್ಮಠದಲ್ಲಿ ಇಳಿಯದೆ ಮುಂದಕ್ಕೆ ಹೋಗಿ ಸಾಯಂಕಾಲದ ವರೆಗೆ ಬಾಲಕಿ ನಾಪತ್ತೆಯಾಗಿದ್ದಳು. ಮನೆಯವರು,ಕುಟುಂಬಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆಯಾಗಿರುವ ಬಗ್ಗೆ ಸಂದೇಶ ರವಾನಿಸಿ ಸಹಕರಿಸಲು ಮನವಿ ಮಾಡಲಾಗಿತ್ತು. ಇದೀಗ ಪೊಲೀಸರು ಬಾಲಕಿಯನ್ನು ಇಲ್ಲಿನ ಕೊಂಬಾರು ಎಂಬಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದು, ಬಾಲಕಿ ತನ್ನನ್ನು ವ್ಯಕ್ತಿಯೋರ್ವ ಅಪಹರಿಸಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಈ ಘಟನೆಗೆ ಸಂಭಂಧಿಸಿದಂತೆ ಕೊಂಬಾರಿನ ರಾಮಣ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ವಿದ್ಯಾರ್ಥಿನಿ ನೀಡುವ ಹೇಳಿಕೆ ಹಾಗೂ ರಾಮಣ್ಣ ಎಂಬಾತನ ಜೊತೆಗೆ ಕೆಲಸ ಮಾಡುವವರು ಹೇಳುವ ಹೇಳಿಕೆಗಳು ಗೊಂದಲವಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಬಾಲಕಿ ತನ್ನನ್ನು ಶಾಲೆಯ ಹತ್ತಿರದಿಂದಲೇ ಅಪಹರಿಸಿದ್ದಾಗಿ ಹೇಳುತ್ತಿದ್ದೂ ಪೋಲಿಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.