
ವರ ಬೇಕು, ಆದರೆ ಸಾಫ್ಟ್‌ವೇರ್ ಇಂಜಿನಿಯರ್ ಗಳು ಕರೆ ಮಾಡಬೇಡಿ ಎಂಬ ಜಾಹಿರಾತು ನೀಡಿದ ಯುವತಿ
Wednesday, September 21, 2022
ನವದೆಹಲಿ: ವಿವಾಹವಾಗಲು ವರ ಬೇಕು, ವಧು ಬೇಕು ಎಂದು ದಿನಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಹಾಕುವುದು ಸೆದವೇ ಸಾಮಾನ್ಯ. ಆದರೆ ಇಲ್ಲೊಂದು ವರ ಬೇಕೆಂಬ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ಎಂಬಿಎ ವ್ಯಾಸಂಗ ಹೊಂದಿರುವ 24 ವರ್ಷದ ಸುಂದರ ಯುವತಿಗೆ ವರ ಬೇಕು ಎಂದು ಈ ಜಾಹಿರಾತಿನ ಒಕ್ಕಣೆ ಆರಂಭವಾಗುತ್ತದೆ. ಉದ್ಯಮ ಹೊಂದಿರುವ ಕುಟುಂಬದ ಶ್ರೀಮಂತ ಯುವತಿ. ಐಎಎಸ್/ಐಪಿಎಸ್ ಅಧಿಕಾರಿಗಳು, ವೈದ್ಯರು, ಉದ್ಯಮಿಗಳು ಮದುವೆಯಾಗಲು ಮುಂದೆ ಬರಬಹುದು. ಆದರೆ, "ಸಾಫ್ಟ್ ವೇರ್ ಇಂಜಿನಿಯರ್‌ಗಳು ದಯವಿಟ್ಟು ಕರೆ ಮಾಡಬೇಡಿ’' ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.
ಇಂಜಿನಿಯರ್‌ಗಳಿಗಿದ್ದ ಈ ವಿಶೇಷ ಸೂಚನೆ ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಆ ಬಳಿಕ ಈ ಜಾಹೀರಾತಿನ ಪೇಪರ್ ಕಟ್ಟಿಂಗ್ ವೈರಲ್ ಆಗಿದ್ದು, 'ಇಂಜಿನಿಯರ್‌ಗಳ ಭವಿಷ್ಯ ಇಷ್ಟೇ ಕಣ್ರೀ’ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು.