ವಿಟ್ಲಪಡ್ನೂರು: ಜಾಗಕ್ಕಾಗಿ ಜಗಳ ಸಹೋದರನ ಕೊಲೆಯಲ್ಲಿ ಅಂತ್ಯ
Wednesday, September 14, 2022
ವಿಟ್ಲಪಡ್ನೂರು: ಜಾಗದ ವಿಚಾರದಲ್ಲಿ ಹಲವು ಕಾಲಗಳಿಂದ ನಡೆಯುತ್ತಿದ್ದ ಸಹೋದರರ ನಡುವಿನ ಜಗಳವು ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿರುವ ದುರಾದೃಷ್ಟಕರ ಘಟನೆ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಬನಾರಿಯಲ್ಲಿ ಸಂಭವಿಸಿದೆ.
ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಎಂಬವರನ್ನು ಸಹೋದರ ಪದ್ಮನಾಭ (49) ಕೊಲೆಗೈದಿದ್ದಾನೆ.
ಮದ್ಯಸೇವನೆ ಮಾಡಿ ಮನೆಯಲ್ಲಿ ಆಗಾಗ ಗಲಾಟೆ ಸಂಭವಿಸುತ್ತಿತ್ತು. ಈ ಬಗ್ಗೆ ಒಂದು ತಿಂಗಳ ಹಿಂದೆಯೇ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ರಾತ್ರಿಯೂ ಗಲಾಟೆ ನಡೆದಿದೆ ಎನ್ನಲಾಗಿದ್ದು, ಬುಧವಾರ ವಿಟ್ಲ ಠಾಣೆಗೆ ದೂರು ಬಂದಿದೆ. ಆದರೆ ಸಹೋದರನ ಕೊಲೆಯಲ್ಲಿ ಈ ಜಗಳ ಅಂತ್ಯಗೊಂಡಿದೆ.