ಬೆಳ್ತಂಗಡಿ: ಎನ್‌ಸಿಇಆರ್‌ಟಿ ನಡೆಸಿರುವ ಪ್ರವೇಶ ಪರೀಕ್ಷೆಯಲ್ಲಿ ದೀಕ್ಷಾ ಬಿ.ಎಸ್. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ
Wednesday, September 14, 2022
ಬೆಳ್ತಂಗಡಿ: ಎನ್‌ಸಿಇಆರ್‌ಟಿ ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ದೀಕ್ಷಾ ಬಿ.ಎಸ್. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಈ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದವರು ಆರ್‌ಐಇ (ರೀಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್) ಗಳಲ್ಲಿ ಮೂಲವಿಜ್ಞಾನ ಓದಲು ಅರ್ಹತೆ ಪಡೆಯುತ್ತಾರೆ. ಈ ಮೂಲಕ ದೀಕ್ಷಾ ಬಿ.ಎಸ್. ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮಾಡಲು ಆಯ್ಕೆಯಾಗಿದ್ದಾರೆ.
ಎಂಎಸ್ಸಿ ಮತ್ತು ಬಿಎಸ್ಸಿ ಇಡಿ ಪದವಿಗೆ ಅರ್ಹತೆ ಪಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೀಕ್ಷಾ ಅವರು, ಎಂಎಸ್ಸಿ ಇಡಿ ಗಣಿತ ಮತ್ತು ಎಂಎಸ್ಸಿ ಇಡಿ ರಸಾಯನ ಶಾಸ್ತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ (ಬ್ಯಾಂಕ್) ಸ್ಥಾನ , ಬಿಎಸ್ಸಿ ಇಡಿಯಲ್ಲಿ ರಾಜ್ಯಕ್ಕೆ ಮೊದಲ ( ಬ್ಯಾಂಕ್ ) ಸ್ಥಾನ ಪಡೆದಿದ್ದಾರೆ.
ದೀಕ್ಷಾ ಈ ಮೊದಲು ದ್ವಿತೀಯ ಪಿಯು ಪರೀಕ್ಷೆಯಲ್ಲಿ 593 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದರು. ಸಿಇಟಿಯಲ್ಲೂ ಉತ್ತಮ ರ್ಯಾಂಕ್ ಪಡೆದಿದ್ದರು. ದೀಕ್ಷಾ ಉಜಿರೆ ಎಸ್‌ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಧರ ಭಟ್ ಉಜಿರೆ ಹಾಗೂ ಹಳೇಪೇಟೆಯ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕಿ ವೀಣಾ ಶ್ಯಾನುಭಾಗ ದಂಪತಿಯ ಪುತ್ರಿ.