
ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಮನೆಗೆ ಎನ್ಐಎ ದಾಳಿ
Thursday, September 8, 2022
ಮಂಗಳೂರು: ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಮನೆಗೆ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇಂದು ಬೆಳ್ಳಂಬೆಳಗ್ಗೆ ಅವರ ಬಿ.ಸಿ.ರೋಡ್ ಕೈಕಂಬದಲ್ಲಿರುವ ಮನೆಯ ಮೇಲೆ ದಾಳಿನಡೆಸಿದೆ.
ಈ ವೇಳೆ ಸ್ಥಳೀಯ ಎಸ್ ಡಿಪಿಐ ಕಾರ್ಯಕರ್ತರು ರಿಯಾಝ್ ಫರಂಗಿಪೇಟೆ ಮನೆಮುಂದೆ ಜಮಾಯಿಸಿದ್ದು, ಗೋಬ್ಯಾಕ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಕಳೆದ ಕೆಲ ದಿನಗಳಿಂದ ಎನ್ಐಎ ಸಕ್ರಿಯವಾಗಿ ದ.ಕ.ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದು ಅದರ ಮುಂದುವರಿದ ಭಾಗ ಎನ್ನಲಾಗುತ್ತಿದೆ.