![ಚೆನ್ನೈ: ಪುತ್ರಿಯ ಸಹಪಾಠಿಗೆ ವಿಷವಿಕ್ಕಿ ಕೊಲೆಗೈದ ಮಹಾತಾಯಿ! ಚೆನ್ನೈ: ಪುತ್ರಿಯ ಸಹಪಾಠಿಗೆ ವಿಷವಿಕ್ಕಿ ಕೊಲೆಗೈದ ಮಹಾತಾಯಿ!](https://blogger.googleusercontent.com/img/b/R29vZ2xl/AVvXsEjldiktJ4kXfGFzHeaRvitV5u9c2Ry0NJEFHQ5GnlkACTvg4cidsO7odEwa-Hak2ixRY4s5KRJwgwg65HzvJ7KAZxqKZGpktlICMcxeuKfKBYcNASDFt5u3C_f_PLGyAoVuS4AaMqaRpFRm/s1600/1662448519363672-0.png)
ಚೆನ್ನೈ: ಪುತ್ರಿಯ ಸಹಪಾಠಿಗೆ ವಿಷವಿಕ್ಕಿ ಕೊಲೆಗೈದ ಮಹಾತಾಯಿ!
Tuesday, September 6, 2022
ಚೆನ್ನೈ: ಪಾಠ, ಪಠ್ಯೇತರ ವಿಚಾರದಲ್ಲಿ ಸದಾ ತನ್ನ ಪುತ್ರಿಯನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸುತ್ತಾನೆಂದು 13 ವರ್ಷದ ಬಾಲಕನಿಗೆ ಹಾಲಿಗೆ ವಿಷವಿಕ್ಕಿ ಮಹಾತಾಯಿಯೊಬ್ಬಳು ಕೊಲೆಗೈದಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಇದೀಗ ಆರೋಪಿತೆಯನ್ನು ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.
ಬಾಲ ಮಣಿಕಂಠನ್(13) ಮೃತ ದುರ್ದೈವಿ ಬಾಲಕ. ಜೆ.ಸಗಾಯ್ ರಾಣಿ ವಿಕ್ಟೋರಿಯಾ (42) ಆರೋಪಿತೆ ಬಂಧಿತ ಮಹಿಳೆ.
ಕಾರೈಕಲ್ ನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ ಮಣಿಕಂಠನ್ ನ ತರಗತಿಯಲ್ಲಿಯೇ ಜೆ.ಸಗಾಯ್ ರಾಣಿ ವಿಕ್ಟೋರಿಯಾ ಕಲಿಯುತ್ತಿದ್ದಳು. ಬಾಲ ಮಣಿಕಂಠನ್ ಎಲ್ಲಾ ವಿಚಾರದಲ್ಲೂ ಆಕೆಯ ಪುತ್ರಿಗಿಂತ ಮುಂದಿದ್ದ. ಆದ್ದರಿಂದ ಆತನಿಲ್ಲದಿದ್ದಲ್ಲಿ ತನ್ನ ಪುತ್ರಿಗೇ ಪ್ರಥಮ ಸ್ಥಾನ ದೊರಕುತ್ತದೆ ಎಂದು ಆರೋಪಿತೆ ಆತನ ಕೊಲೆಗೆ ಸಂಚು ರೂಪಿಸಿದ್ದಾಳೆ.
ಅದಕ್ಕಾಗಿ ಸಗಾಯ್ ರಾಣಿ ವಿಕ್ಟೋರಿಯಾ ಶಾಲೆಯ ವಾರ್ಷಿಕೋತ್ಸದಂದು ಶಾಲೆಗೆ ಆಗಮಿಸಿ ತಾನು ಬಾಲಮಣಿಕಂಠನ್ ತಾಯಿ ಎಂದು ಹೇಳಿ ಎರಡು ಬಾಟಲಿ ಹಾಲನ್ನು ಸೆಕ್ಯುರಿಟಿ ಗಾರ್ಡ್ ಗೆ ನೀಡಿದ್ದಾಳೆ. ಅದನ್ನು ಬಾಲ ಮಣಿಕಂಠನ್ ಗೆ ನೀಡುವಂತೆ ಹೇಳಿದ್ದಾಳೆ. ಅದರಂತೆ ಆ ಹಾಲು ಸೇವಿಸುತ್ತಿದ್ದಾನೆ. ಆದರೆ ಮನೆಗೆ ಬರುತ್ತಿದ್ದಂತೆ ಅಸ್ವಸ್ಥನಾಗಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲ ಮಣಿಕಂಠನ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಸಗಾಯ್ ರಾಣಿ ವಿಕ್ಟೋರಿಯಾ ನಡೆಸಿರುವ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಆಕೆಯನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಲಾಗಿದೆ.